ಕಡಬ: ಯುವಕ ನಾಪತ್ತೆ ಪ್ರಕರಣ: ಓರ್ವ ಪೊಲೀಸ್ ವಶಕ್ಕೆ

ಕಡಬ: ಯುವಕ ನಾಪತ್ತೆ ಪ್ರಕರಣ: ಓರ್ವ ಪೊಲೀಸ್ ವಶಕ್ಕೆ

Kadaba Times News
0
ಕಡಬ: ಶಾಮಿಯಾನದ ಕೆಲಸಕ್ಕೆಂದು ಹೋದ ಬಿಳಿನೆಲೆ ಗ್ರಾಮದ ಯುವಕ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು  ಕಡಬ ಪೊಲೀಸರು ಡಿ.2 ರಂದು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ವಿಚಾರದ ಹಿನ್ನಲೆಯಲ್ಲಿ  ಠಾಣೆಗೆ ಡಿವೈಎಸ್ಪಿ ರಾತ್ರಿಯೇ ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ.ಅಲ್ಲದೆ ಕಾಣೆಯಾದ ಯುವಕನ ಮನೆಯವರು ಠಾಣೆಗೂ ಆಗಮಿಸಿ ಬಳಿಕ ಪೊಲೀಸರ ಮನವಿ ಮೇರೆಗೆ ತೆರಳಿರುವುದಾಗಿ ತಿಳಿದು ಬಂದಿದೆ.

ಬಿಳಿನೆಲೆ ಗ್ರಾಮದ ಮುಂಗ್ಲಿ ನಿವಾಸಿ ಸಂದೀಪ್ ಎಂಬವರು ನ.27 ರಂದು ನಾಪತ್ತೆಯಾಗಿದ್ದು ನೆಟ್ಟಣದ ಪ್ರತೀಕ್ ಎಂಬಾತನ ಜೊತೆ ಕಾರಲ್ಲಿ ಹೋಗಿರುವ ಬಗ್ಗೆ ಶಾಮಿಯಾನ ಮಾಲಕ ಮನೆಯವರಿಗೆ ತಿಳಿಸಿರುವುದಾಗಿ ನಾಪತ್ತೆಯಾದ ಯುವಕನ ತಾಯಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದರು.


ಇದೀಗ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.ಈ ಮಡುವೆ ನೆಟ್ಟಣ ಪರಿಸರದಲ್ಲಿ ಜನರು ಹುಡುಕಾಟ ನಡೆಸುತ್ತಿರುವುಗಾಗಿ ತಿಳಿದು ಬಂದಿದೆ. ಈ ಬಗ್ಗೆ ಕಡಬ ಠಾಣಾ ಉಪನಿರೀಕ್ಷರು ಮಾಹಿತಿ ನೀಡಿ ಎಲ್ಲಾ ಆಯಾಮಗಳಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದಿದ್ದಾರೆ. ಸಾರ್ವಜನಿಕರ ಗೊಂದಲ, ವದಂತಿಗಳಿಗೆ ಪೊಲೀಸರ ಸಮಗ್ರ ತನಿಖೆಯ ಮೂಲಕ ಸತ್ಯಾಸತ್ಯತೆ ತಿಳಿದು ಬರಲಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top