ಕುಕ್ಕೆ ಸುಬ್ರಹ್ಮಣ್ಯ: ಮಠದ ಸಭಾಂಗಣ ನುಗ್ಗಿದ ಕಾಡಾನೆ:ದೇಗುಲದ ಬಳಿ ಕೆಲ ಹೊತ್ತು ಆತಂಕದ ವಾತಾವರಣ

ಕುಕ್ಕೆ ಸುಬ್ರಹ್ಮಣ್ಯ: ಮಠದ ಸಭಾಂಗಣ ನುಗ್ಗಿದ ಕಾಡಾನೆ:ದೇಗುಲದ ಬಳಿ ಕೆಲ ಹೊತ್ತು ಆತಂಕದ ವಾತಾವರಣ

Kadaba Times News
0
ಕುಕ್ಕೆ ಸುಬ್ರಹ್ಮಣ್ಯ: ಷಷ್ಠಿ ಸಂಭ್ರಮದಲ್ಲಿರುವ ಕುಕ್ಕೆಯಲ್ಲಿ ದೇಗುಲದ ಸಮೀಪವೇ ಕಾಡಾನೆಯೊಂದು ಪ್ರತ್ಯಕ್ಷಗೊಂಡಿದ್ದು ಜನ ಭಯಭೀತಗೊಂಡ ಘಟನೆ ಡಿ.1 ರಾತ್ರಿ 9 ಸುಮಾರಿಗೆ ನಡೆದಿದೆ.


ಕುಕ್ಕೆ ಸುಬ್ರಹ್ಮಣ್ಯ ದೇಗುಲದ ವ್ಯಾಸ ಮಂದಿರದ ಬಳಿ ಕಾಡಾನೆ ಇರುವುದು ಕಂಡು ಬಂದಿದೆ. ಬಳಿಕ ಪಕ್ಕದ ಮಠದ ಸಭಾಂಗಣ ದೊಳಗೆ ಧಾವಿಸಿ ಬಂದಿದ್ದು ಕೆಲ ಹೊತ್ತು ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.


ಕೆಲ ಸಮಯದ ಬಳಿಕ ದೇವರಗದ್ದೆಯತ್ತ  ಕಾಡಂಚಿನ ಕಡೆ ಕಾಡಾನೆ ತೆರಳಿದೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top