ನೆಟ್ಟಣ: ಎಕ್ಸ್ ಪ್ರೆಸ್ ರೈಲಿನಲ್ಲಿ ಮೆಟ್ಟಿಲ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ ಪ್ರಯಾಣಿಕ ಬಿದ್ದು ಮೃತ್ಯು

ನೆಟ್ಟಣ: ಎಕ್ಸ್ ಪ್ರೆಸ್ ರೈಲಿನಲ್ಲಿ ಮೆಟ್ಟಿಲ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ ಪ್ರಯಾಣಿಕ ಬಿದ್ದು ಮೃತ್ಯು

Kadaba Times News
0

ರೈಲಿನಿಂದ ಬಿದ್ದು ಮೃತ ಪಟ್ಟ ಘಟನೆ( ಕಡಬ ಟೈಮ್ಸ್)


ಕಡಬ ಟೈಮ್ಸ್, ನೆಟ್ಟಣ: ರೈಲಿನಿಂದ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಡಿ.17ರ ಮಂಗಳವಾರ ಬೆಳಿಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ವ್ಯಾಪ್ತಿಯ ತುಂಬೆ ಸಮೀಪದ ನೆತ್ತರಕೆರೆ ಎಂಬಲ್ಲಿ ನಡೆದಿದೆ.

ಕಡಬ ತಾಲೂಕಿನ ಬಿಳಿನೆಲೆ ಗೂನಡ್ಕ ನಿವಾಸಿ ಶಶಿಕುಮಾರ್ ಎಸ್. ಮೃತಪಟ್ಟವರು ಎಂದು ಗುರುತಿಸಲಾಗಿದೆ.ರಾತ್ರಿ ಸುಮಾರು 11 ಗಂಟೆಯ ವೇಳೆ ಸುಬ್ರಮಣ್ಯದಿಂದ ಮಂಗಳೂರಿಗೆ ತೆರಳುತ್ತಿದ್ದ   ಎಕ್ಸ್ ಪ್ರೆಸ್ ರೈಲೊಂದರಿಂದ ಕೆಳಗೆ ಬಿದ್ದು ಇವರು ಸಾವನ್ನಪ್ಪಿದ್ದಾರೆ.


ಶಶಿಕುಮಾರ್ ಅವರು ರೈಲಿನ ಮೆಟ್ಟಿಲಿನ ಮೇಲೆ ಕುಳಿತು ಪ್ರಯಾಣಿಸುತ್ತಿದ್ದರು. ಇದೇ ವೇಳೆ ಆಯತಪ್ಪಿ ಕೆಳಗೆ ಬೀಳುವುದನ್ನು ಕಂಡು ಬೋಗಿಯಲ್ಲಿದ್ದ ಇತರರು ಮಂಗಳೂರು ರೈಲ್ವೆ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.


ಅದೇ ವೇಳೆ ರೈಲಿನ ಹಳಿಯ ಸಮೀಪದ ಪೊದೆಯಲ್ಲಿ ತಲೆಗೆ ಏಟು ಬಿದ್ದು ರಕ್ತಸಿಕ್ತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದರೂ ಕೂಡ ಈತನ ಹೆಸರು, ವಿಳಾಸದ ಮಾಹಿತಿ ಸಿಗುವಾಗ ತಡವಾಗಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.


‌‌ಆರಂಭದಲ್ಲಿ ಈತನ ಸಾವಿನ ಬಗ್ಗೆ ಒಂದಷ್ಟು ಗೊಂದಲಗಳು ಇತ್ತಾದರೂ ರೈಲ್ವೆ ಪೋಲೀಸರ ಮಾಹಿತಿ ಬಳಿಕ ಸ್ಪಷ್ಟನೆ ಸಿಕ್ಕಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top