ಕಡಬದ ಬಂಕ್‌ನಲ್ಲಿ ಡೀಸೆಲ್ ಹಣ ಕೊಡದೆ ವಾಹನ ಚಾಲಕ ಸಿನಿಮೀಯ ಶೈಲಿಯಲ್ಲಿ ಪರಾರಿ ಘಟನೆ: ಹತ್ತು ದಿನ ಕಳೆದರೂ ಸುಳಿವೇ ಇಲ್ಲ

ಕಡಬದ ಬಂಕ್‌ನಲ್ಲಿ ಡೀಸೆಲ್ ಹಣ ಕೊಡದೆ ವಾಹನ ಚಾಲಕ ಸಿನಿಮೀಯ ಶೈಲಿಯಲ್ಲಿ ಪರಾರಿ ಘಟನೆ: ಹತ್ತು ದಿನ ಕಳೆದರೂ ಸುಳಿವೇ ಇಲ್ಲ

Kadaba Times News
0

 ಕಡಬ ಟೈಮ್, ಪ್ರಮುಖ ಸುದ್ದಿ : ಬೆಳ್ಳಂಬೆಳಗ್ಗೆ   ಕಡಬದ ಪೆಟ್ರೊಲ್ ಪಂಪೊದಕ್ಕೆ ತನ್ನ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ  ಡಿಸೇಲ್ ತುಂಬಿಸಿಕೊಂಡು ಹಣ ನೀಡದೆ ಸಿನಿಮೀಯ ಶೈಲಿಯಲ್ಲಿ ಪರಾರಿಯಾದ ಘಟನೆ ಜ. 22 ರ ಮುಂಜಾನೆ  ನಡೆದಿತ್ತು. ಇದೀಗ ಈ ಘಟನೆ ನಡೆದು ಇಂದಿಗೆ (ಜ.31)  ಹತ್ತು ದಿನವಾದರೂ ವಾಹನದ ಪತ್ತೆಯೇ ಆಗಿಲ್ಲ.

ಪೆಟ್ರೋಲ್ ಪಂಪ್ ನಲ್ಲಿ ನಿಂತಿರುವ ವಾಹನ(KADABA TIMES)


ಸುಬ್ರಹ್ಮಣ್ಯ ರಸ್ತೆಯ ಹಳೆಸ್ಟೇಷನ್ ಬಳಿಯ ಹಿಂದೂಸ್ಥಾನ್ ಪೆಟ್ರೋಲ್  ಪಂಪ್ ನಲ್ಲಿ ಮುಂಜಾನೆ 6 ರ ಸುಮಾರಿಗೆ ಈ ಘಟನೆ ನಡೆದಿತ್ತು.  ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯೂ ಆಗಿತ್ತು  .  KA01MX9632 ನಂಬರಿನ ಥಾರ್ ಜೀಪ್  ನಲ್ಲಿ ಬಂದ ವ್ಯಕ್ತಿ ತನ್ನ ವಾಹನಕ್ಕೆ ಫುಲ್ ಟ್ಯಾಂಕ್ ಡಿಸೇಲ್ ತುಂಬಿಸಿದ್ದ

ನಂತರ ಒಂದು ಕ್ಯಾನ್ ನೀಡಿ ಅದರಲ್ಲಿ ತುಂಬಿಸಲು ಸೂಚಿಸಿದಾಗ ಪೆಟ್ರೋಲ್ ಬಂಕ್ ಸಿಬ್ಬಂದಿ ತೆರಳಿದ್ದು ಈ ಸಂದರ್ಭದಲ್ಲಿ ಏಕಾಏಕಿ ವಾಹನದಲ್ಲಿ ಪರಾರಿಯಾಗಿರುವುದು ಸಿಸಿ ಟಿವಿ ದೃಶ್ಯದಲ್ಲಿ ಸೆರೆಯಾಗಿತ್ತು . 


ಪೊಲೀಸರ  ಪ್ರಾಥಮಿಕ ಮಾಹಿತಿ ಪ್ರಕಾರ  ಈ ವಾಹನದಲ್ಲಿರುವ  ನಂಬರ್ ನಕಲಿಯಾಗಿರುವುದು ಗೊತ್ತಾಗಿದೆ.  ಪೆಟ್ರೋಲ್ ಬಂಕ್ ಸಿಬ್ಬಂದಿಗಳು ತಡವಾಗಿ ಪೊಲೀಸರ ಗಮನಕ್ಕೆ ತಂದು ದೂರು ನೀಡಿದ್ದರು.  ಪೊಲೀಸರು ಮಾಹಿತಿ ಕಲೆ ಹಾಕಲು ಮುಂದಾಗಿದ್ದರು. ಪೊಲೀಸರಿಗೆ ಘಟನೆ ನಡೆದ ತಕ್ಷಣವೇ ಮಾಹಿತಿ ನೀಡುತ್ತಿದ್ದರೆ ಇದರ ಜಾಡು ಹಿಡಿಯಲು ಸುಲಭ ಮಾರ್ಗಗಳಿದ್ದವು. ಆದ್ರೆ ಘಟನೆ ನಡೆದ ಸುಮಾರು ನಾಲ್ಕು ಗಂಟೆಯ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇದೀಗ  ಈ ಘಟನೆ ನಡೆದು ಹತ್ತು ದಿನವಾದರೂ ವಾಹನದ ಪತ್ತೆಯಾಗಿಲ್ಲ. ಇಲ್ಲಿನ ಸಿಸಿ ಟಿವಿ, ನಕಲಿ ನಂಬರ್ ಪ್ಲೇಟ್ ಇತ್ಯಾದಿ ವಿಚಾರಗಳು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ.  ಕನಿಷ್ಟ ಯಾವ ರಸ್ತೆಯಲ್ಲಿ ಹೋಗಿದೆ ಎಂಬುದುದರ ಬಗ್ಗೆಯೂ ಖಚಿತತೆ ಇಲ್ಲವಾಗಿದೆ. ಸದ್ಯ ಈ ವಿಚಾರ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಬಂದಿದೆ. 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top