Bigg Boss Kannada 11 Winner : ಬಿಗ್‌ ಬಾಸ್‌’ ವಿನ್ನರ್‌ ಆಗಿ ಗೆದ್ದು ಬೀಗಿದ ಹಳ್ಳಿಹಕ್ಕಿ

Bigg Boss Kannada 11 Winner : ಬಿಗ್‌ ಬಾಸ್‌’ ವಿನ್ನರ್‌ ಆಗಿ ಗೆದ್ದು ಬೀಗಿದ ಹಳ್ಳಿಹಕ್ಕಿ

Kadaba Times News
0

ಕಡಬ ಟೈಮ್, ಮನೋರಂಜನೆ:  ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮಕ್ಕೆ ಅದ್ಧೂರಿ ತೆರೆಬಿದ್ದಿದೆ. ‘ಬಿಗ್ ಬಾಸ್ ಕನ್ನಡ ಸೀಸನ್‌ 11’ ಗ್ರ್ಯಾಂಡ್ ಫಿನಾಲೆ ಮುಕ್ತಾಯವಾಗಿದೆ.

 

ವಿಜೇತರಾಗಿ ಕುರಿಗಾಹಿ ಹನುಮಂತ ಲಮಾಣಿ ಹೊರ ಹೊಮ್ಮಿದ್ದು   ರೆಕ್ಕೆಗಳನ್ನೊಳಗೊಂಡ ಬಿಬಿಕೆ 11 ವಿನ್ನರ್ಟ್ರೋಫಿ ಹಳ್ಳಿಹಕ್ಕಿ  ಪಾಲಾಗಿದೆ.



ಬಿಗ್ ಬಾಸ್ ಆಟ ಶುರುವಾಗಿ 4 ವಾರ ಕಳೆದ ಮೇಲೆ ಸ್ಪರ್ಧಿಯಾಗಿ ದೊಡ್ಮನೆಗೆ ಹನುಮಂತ ಕಾಲಿಟ್ಟರು. ಮನೆಯ ಜಗಳ ನೋಡಿ ಹನುಮಂತು ಬೆಚ್ಚಿಬಿದ್ದಿದ್ದರು. ಆದರೂ ಛಲ ಬಿಡದೇ ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿ ಫಿನಾಲೆಗೆ ಮೊದಲು ಆಯ್ಕೆಯಾದರು.


ಈಗ ಪರಾಕ್ರಮ ಮೆರೆದ ತ್ರಿವಿಕ್ರಮ್‌ಗೆ ಮಣ್ಣು ಮುಕ್ಕಿಸಿ ವಿನ್ನರ್ ಆಗಿ ಹನುಮಂತು ಹೊರಹೊಮ್ಮಿದ್ದಾರೆ. ಜೊತೆಗೆ 50 ಲಕ್ಷ ರೂಪಾಯಿ ತಮ್ಮದಾಗಿಸಿಕೊಂಡಿದ್ದಾರೆ. ಇನ್ನೂ ಮನದರಸಿಯ ಬಗ್ಗೆ ಆಗಾಗ ಹನುಮಂತ ಹೇಳುತ್ತಿದ್ದರು. ‘ಬಿಗ್ ಬಾಸ್’ ಪಟ್ಟ ಗೆದ್ದರೆ ಅತ್ತಿ ಮನೆಗೆ ಹೋಗಿ ಹುಡುಗಿಯನ್ನು ಕೇಳುತ್ತೇನೆ ಎಂದು ಹನುಮಂತ ಹೇಳಿದ್ದರು. ಹಾಗಾದ್ರೆ ಕರ್ನಾಟಕದ ಜನತೆಗೆ ತಮ್ಮ ಹುಡುಗಿಯ ಪರಿಚಯ ಮಾಡಿಸಿ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡುತ್ತಾರಾ? ಎಂದು ಕಾದುನೋಡಬೇಕಿದೆ.


ರಜತ್ ಗೆ ಮೂರನೇ ಸ್ಥಾನ: 'ಬಿಗ್ ಬಾಸ್ ಕನ್ನಡ 11' ಕಾರ್ಯಕ್ರಮದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್‌ ಮೂರನೇ ಸ್ಥಾನ ಪಡೆದಿದ್ದಾರೆ. 50 ದಿನಗಳಾದ್ಮೇಲೆ 'ಬಿಗ್ ಬಾಸ್' ಮನೆಯೊಳಗೆ ಬಂದ ರಜತ್‌ 2ನೇ ರನ್ನರ್‌ ಅಪ್‌ ಆಗಿದ್ದಾರೆ.


ಹನುಮಂತ ಲಮಾಣಿಗೆ ಸಿಕ್ಕ ಮತಗಳು : ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದ ವಿನ್ನರ್‌ ಆದ ಹನುಮಂತ ಲಮಾಣಿಗೆ ಒಟ್ಟು 5,23,89,318 ವೋಟ್ಸ್ ಬಿದ್ದಿವೆ. ‘ಬಿಗ್ ಬಾಸ್ ಕನ್ನಡ’ ಇತಿಹಾಸದ ಇಷ್ಟೂ ಸೀಸನ್‌ಗಳಲ್ಲಿ ವಿನ್ನರ್‌ಗೆ ಇಷ್ಟೊಂದು ವೋಟು ಬಿದ್ದಿರೋದು ಇದೇ ಮೊದಲು ಎನ್ನಲಾಗಿದೆ.


 ರನ್ನರ್‌ ಅಪ್ ತ್ರಿವಿಕ್ರಮ್:‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಮೊದಲ ದಿನದಿಂದಲೂ ಇದ್ದು ಎಲ್ಲಾ ಪ್ರೆಶರ್‌ಗಳನ್ನ ಹ್ಯಾಂಡಲ್‌ ಮಾಡಿ, ಸವಾಲುಗಳನ್ನ ಎದುರಿಸಿದವರು ತ್ರಿವಿಕ್ರಮ್‌. ಟಾಸ್ಕ್‌ಗಳಲ್ಲಿ ಉತ್ತಮ ಪರ್ಫಾಮೆನ್ಸ್ ನೀಡುತ್ತಿದ್ದ ತ್ರಿವಿಕ್ರಮ್‌ ವಿನ್ನರ್ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ತ್ರಿವಿಕ್ರಮ್‌ಗೆ ಹೋಲಿಸಿದರೆ ಹನುಮಂತಗೆ ಹೆಚ್ಚು ವೋಟ್ಸ್ ಲಭಿಸಿವೆ. ಹೀಗಾಗಿ, ತ್ರಿವಿಕ್ರಮ್‌ ರನ್ನರ್‌ ಅಪ್‌ ಆಗಿದ್ದಾರೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top