ಕಡಬ: ಮಗನ ಬಳಿ ಹೋಗುವುದಾಗಿ ಮನೆಯಿಂದ ಹೋದ ಐತ್ತೂರಿನ ವ್ಯಕ್ತಿ ನಾಪತ್ತೆ:ಠಾಣೆಯಲ್ಲಿ ಪ್ರಕರಣ ದಾಖಲು

ಕಡಬ: ಮಗನ ಬಳಿ ಹೋಗುವುದಾಗಿ ಮನೆಯಿಂದ ಹೋದ ಐತ್ತೂರಿನ ವ್ಯಕ್ತಿ ನಾಪತ್ತೆ:ಠಾಣೆಯಲ್ಲಿ ಪ್ರಕರಣ ದಾಖಲು

Kadaba Times News
0

 ಕಡಬ ಟೈಮ್, ಪ್ರಮುಖ ಸುದ್ದಿ:  ಕಡಬ ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದಲ್ಲಿ   ರಬ್ಬರ್ ಟ್ಯಾಪರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ನಾಪೆತ್ತೆಯಾಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಡಬ ತಾಲೂಕು ಐತ್ತೂರು ಗ್ರಾಮದ  ಸಿ.ಆರ್.ಸಿ 72 ಕಾಲನಿ ನಿವಾಸಿ ಮಣಿಮಾರನ್ ನಾಪತ್ತೆಯಾದವರು.



ಜ.10 ರಂದು  ಮಂಗಳೂರಿನಲ್ಲಿರುವ ತನ್ನ ಮಗ ಪ್ರಸನ್ನ ಎಂಬವರ  ಬಳಿ ಹೋಗುವುದಾಗಿ ಹೇಳಿ ಹೋಗಿದ್ದು  ಗಮನ ರೂಮಿಗೂ ಹೊಗದೆ ಇತ್ತ ಮನೆಗೂ ಬಾರದೆ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೋನ್ ನಂಬರಿಗೆ ಕರೆ ಮಾಡಿದರೂ ಸ್ವಿಚ್ ಆಫ್ ಬರುತ್ತಿದೆ. ನೆರೆ ಕರೆ ಮತ್ತು  ಕುಟುಂಬ ಬಾಂಧವರಲ್ಲಿ ವಿಚಾರಿಸಿದರೂ ಪತ್ತೆಯಾಗಿರುವುದಿಲ್ಲ. 


ಮರಳಿ ಮನೆಗೆ ಬರಬಹುದೆಂದೂ ನಿರೀಕ್ಷೆಯಲ್ಲಿ ಇಲ್ಲಿಯ ತನಕ ಮನೆಗೆ ಬಾರದೇ ಇರುವುದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು  ನಾಪತ್ತೆಯಾಗಿರುವ ತನ್ನ ಪತಿಯನ್ನು ಪತ್ತೆ ಮಾಡಿಕೊಡುವಂತೆ ಪತ್ನಿ ಶ್ರೀ ಮತಿ ಈಶ್ವರಿ ಅವರು ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ .ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Kadaba-A-man-fro-Aittur,-who-eft-home-to-visit-his-son-has-gone-missing-A-case- has-been-registered

 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top