ಸುಳ್ಯ ಶಾಸಕಿಯ ತವರಲ್ಲೇ ಬಿಜೆಪಿಗೆ ಇರಿಸುಮುರಿಸು: ಮುರುಳ್ಯ ಎಣ್ಮೂರು ಸೊಸೈಟಿ ಚುನಾವಣೆಯಲ್ಲಿ ಗೆದ್ದು ಬೀಗಿದ ಬಂಡಾಯ ಅಭ್ಯರ್ಥಿಗಳು

ಸುಳ್ಯ ಶಾಸಕಿಯ ತವರಲ್ಲೇ ಬಿಜೆಪಿಗೆ ಇರಿಸುಮುರಿಸು: ಮುರುಳ್ಯ ಎಣ್ಮೂರು ಸೊಸೈಟಿ ಚುನಾವಣೆಯಲ್ಲಿ ಗೆದ್ದು ಬೀಗಿದ ಬಂಡಾಯ ಅಭ್ಯರ್ಥಿಗಳು

Kadaba Times News
0

ಕಡಬ ಟೈಮ್, ಸುಳ್ಯ:   ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ .30 ದಿನ ನಿಗದಿಯಾಗಿತ್ತು. ಪಕ್ಷ ಸೂಚಿಸಿದ ಅಭ್ಯರ್ಥಿಗಳ ಬಗ್ಗೆ ಮಾಜಿ ಅಧ್ಯಕ್ಷ ವಸಂತ ನಡುಬೈಲು ತಂಡ ಅಸಮಾಧಾನಗೊಂಡು ಪಕ್ಷದ ಅಭ್ಯರ್ಥಿಗಳ ವಿರುದ್ಧ ಕಣಕ್ಕಿಳಿದಿದ್ದರು. ಹಿನ್ನೆಲೆಯಲ್ಲಿ ಚುನಾವಣೆ ನಡೆದು ಬಂಡಾಯ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಅಧ್ಯಕ್ಷರ ವಸಂತ ನಡುಬೈಲು ,ಉಪಾಧ್ಯಕ್ಷ ನಾಗೇಶ್ ಆಳ್ವ

ನೂತನ  ಅಧ್ಯಕ್ಷರಾಗಿ ವಸಂತ ನಡುಬೈಲು ಹಾಗೂ ಉಪಾಧ್ಯಕ್ಷರಾಗಿ ನಾಗೇಶ್ ಆಳ್ವ ಆಯ್ಕೆಯಾಗಿದ್ದಾರೆ. ಅಧ್ಯಕ್ಷತೆಗೆ ಆಯ್ಕೆ ಸಂದರ್ಭದಲ್ಲಿ ಪಕ್ಷದೊಳಗೆ ಮಾತುಕತೆ ನಡೆದು ಅನೂಪ್ ಬಿಳಿಮಲೆ ಹಾಗೂ ಉಪಾಧ್ಯಕ್ಷತೆಗೆ ರಾಜೇಂದ್ರ ಪ್ರಸಾದ್ ರನ್ನು ಸೂಚಿಸಿದ ಹಿನ್ನೆಲೆಯಲ್ಲಿ ಅವರಿಬ್ಬರು ನಾಮಪತ್ರ ಸಲ್ಲಿಸಿದ್ದರು. ಪಕ್ಷದ ತೀರ್ಮಾನದ ಬಗ್ಗೆ ಅಸಮಾಧಾನಗೊಂಡಿದ್ದ ವಸಂತ ನಡುಬೈಲು ಅಧ್ಯಕ್ಷತೆಗೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಹಾಗೂ ಉಪಾಧ್ಯಕ್ಷತೆಗೆ ನಾಗೇಶ್ ಆಳ್ವ ನಾಮಪತ್ರ ಸಲ್ಲಿಸಿದ್ದರು.


ಮತದಾನ ಪ್ರಕ್ರಿಯೆ ಸಹಕಾರಿ ಸಂಘದ 12 ನಿರ್ದೇಶಕರು ಹಾಗೂ ಒಬ್ಬರು ಡಿಸಿಸಿ ಬ್ಯಾಂಕ್ ಪ್ರತಿನಿಧಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಮತ ಎಣಿಕೆ ನಡೆದಾಗ 9 ಮತ ಪಡೆದು ವಸಂತ ನಡುಬೈಲು ಅಧ್ಯಕ್ಷರಾದರೆ, 4 ಮತ ಪಡೆದ ಅನೂಪ್ ಬಿಳಿಮಲೆ ಸೋಲು ಕಂಡರು.  8 ಮತ ಪಡೆದ ನಾಗೇಶ್ ಆಳ್ವ ಉಪಾಧ್ಯಕ್ಷರಾದರೆ,  ರಾಜೇಂದ್ರ ಪ್ರಸಾದ್ ರವರು 5 ಮತ ಪಡೆದು ಸೋಲು ಕಂಡರು.


ಇದೀಗ ಪಕ್ಷದ ತೀರ್ಮಾನದ ವಿರುದ್ಧ ಬಂಡಾಯ ಹಿನ್ನೆಲೆಯಲ್ಲಿ ಬಣ ರಾಜಕೀಯ ಮತ್ತೆ ತಾರಕ್ಕೇರಿದ್ದು ಎಲ್ಲಾ ಕಡೆ ಗೆದ್ದು ಬೀಗುತ್ತಿರುವ ಬಿಜೆಪಿಗೆ  ನಾಯಕರ ಸಂಖ್ಯೆ ಜಾಸ್ತಿಯಾಗುತ್ತಿದ್ದು ಬಣ ರಾಜಕೀಯ ಮುಗಿಯುವ ಮಾತೇ ಇಲ್ಲ ಎಂಬಂತಾಗಿದೆ.   ಶಾಸಕರ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಬಿಸಿ ತಟ್ಟಿದ್ದು ಕ್ಷೇತ್ರದಾದ್ಯಂತ ಕಾರ್ಯಕರ್ತರಿಗೆ ಪಕ್ಷದದೊಳಗಿನ ಬೆಳವಣಿಗೆ ಇರಿಸುಮುರಿಸು ಉಂಟು ಮಾಡುವಂತಾಗಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top