ಉದ್ಯಮಿಯ ಮನೆಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ದರೋಡೆ: ಅಂತರಾಜ್ಯ ದರೋಡೆಕೋರ ವಿಟ್ಲ ಪೊಲೀಸರ ಬಲೆಗೆ

ಉದ್ಯಮಿಯ ಮನೆಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ದರೋಡೆ: ಅಂತರಾಜ್ಯ ದರೋಡೆಕೋರ ವಿಟ್ಲ ಪೊಲೀಸರ ಬಲೆಗೆ

Kadaba Times News
0

ಕಡಬ ಟೈಮ್, ವಿಟ್ಲ :  ಬೋಳಂತೂರಿನನಾರ್ಶ ಎಂಬಲ್ಲಿ ಉದ್ಯಮಿಯ ಮನೆಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಂತರಾಜ್ಯ ದರೋಡೆಕೋರನನ್ನು ಬಂಧಿಸಿ ಕಾರು ನಗದು ವಶಪಡಿಸಿಕೊಂಡಿದ್ದಾರೆ. 



ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಅನಿಲ್ಫರ್ನಾಂಡಿಸ್‌ (49 ) ಬಂಧಿತ.  ಜ.3 ರಂದು ರಾತ್ರಿ ಬಂಟ್ವಾಳ ತಾಲೂಕು ವಿಟ್ಲ ಪೊಲೀಸ್ಠಾಣಾ ವ್ಯಾಪ್ತಿಯ ಬೋಳಂತೂರು ನಾರ್ಶ ಎಂಬಲ್ಲಿ ಉದ್ಯಮಿಯೊಬ್ಬರ ಮನೆಗೆ ಆರು ಜನ ಅಪರಿಚಿತರು ಇಡಿ ಅಧಿಕಾರಿಗಳೆಂದು ನಂಬಿಸಿ, ಮನೆಯ ಶೋಧನೆ ನಡೆಸಿ, ಸುಮಾರು 30 ಲಕ್ಷ ನಗದನ್ನು ದರೋಡೆ ಮಾಡಿ ಪರಾರಿಯಾಗಿದ್ದರು.

 

ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್, .ಪಿ.ಎಸ್ ರವರ ಅದೇಶದ ಮೇರೆಗೆ, ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತನಿಖಾ ತಂಡ ರಚಿಸಿ, ಅಪರಾಧಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿತ್ತುಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಅನಿಲ್ಫರ್ನಾಂಡಿಸ್ಎಂಬಾತನನ್ನು ಪೊಲೀಸರು ಬಂಧಿಸಿ ಆತನಿಂದ ದರೋಡೆಗೆ ಬಳಸಿದ ಎರ್ಟಿಗಾ ಕಾರು, 5,00,000/-ರೂ ನಗದು ಹಾಗೂ ನಕಲಿ ಕೃತ್ಯ ನಡೆಸುವಾಗ ಕಾರಿಗೆ ಅಳವಡಿಸಿದ್ದ ನಕಲಿ ನಂಬರ ಪ್ಲೇಟ್ನ್ನು ವಶಪಡಿಸಿಕೊಂಡಿದ್ದಾರೆ. ಸ್ವಾಧೀನಪಡಿಸಿಕೊಂಡ ನಗದು ಹಾಗೂ ವಾಹನದ ಒಟ್ಟು ಮೌಲ್ಯ- 11,00,000/- ರೂ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಉಳಿದ ಆರೋಪಿಗಳ ದಸ್ತಗಿರಿಗೆ ಬಾಕಿ ಇರುತ್ತದೆ.

 

ಆರೋಪಿ ಪತ್ತೆಯ ಕಾರ್ಯಾಚರಣೆಯನ್ನು . ಜಿಲ್ಲಾ ಪೊಲೀಸ್ಅಧೀಕ್ಷಕ  ಯತೀಶ್ಎನ್.ಪಿ.ಎಸ್ಮತ್ತು ಹೆಚ್ಚುವರಿ ಪೊಲೀಸ್ಅಧೀಕ್ಷಕ ರಾಜೇಂದ್ರ ಡಿ ಎಸ್ರವರ ಮಾರ್ಗದರ್ಶನದಂತೆ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ  ಎಸ್.‌ ವಿಜಯ ಪ್ರಸಾದ್ರವರ ನಿರ್ದೇಶನದಂತೆ, ವಿಟ್ಲ ಪೊಲೀಸ್ ಠಾಣಾ ಪೊಲೀಸ್ನಿರೀಕ್ಷಕ  ನಾಗರಾಜ್ಹೆಚ್ ರವರ ನೇತೃತ್ವದಲ್ಲಿ ಪೊಲೀಸ್ಉಪ ನಿರೀಕ್ಷಕ  ನಂದಕುಮಾರ ಎಂ ಎಂ, ಕೌಶಿಕ್ಬಿ ಸಿ, ಹರೀಶ್ಕುಮಾರ್‌, ರಾಮಕೃಷ್ಣ ,ವಿದ್ಯಾ ಕೆ.ಜೆ. ರತ್ನಕುಮಾರ, ಸಿಬ್ಬಂದಿಗಳಾದ, ಪ್ರವೀಣ್ಮೂರುಗೋಳಿ, ಉದಯ ರೈ, ರಕ್ಷಿತ್ರೈ ಕೆ, ಅದ್ರಾಂ, ಕರುಣಾಕರ, ರಾಹುಲ್ರಾವ್‌, ಶ್ರೀಧರ ಸಿ ಎಸ್‌, ರಾಧಾಕೃಷ್ಣ, ನಝೀರ್‌, ಇರ್ಷಾದ್ಪಿ, ವಿನಾಯಕ ಬಾರ್ಕಿ, ರಂಜಾನ್‌,ಶಂಕರ ಸಂಶಿ, ಗದಿಗೆಪ್ಪ, ಮಂಜುನಾಥ,ಅಶೋಕ್‌, ವಿವೇಕ್ಕೆ, ಕುಮಾರ್ಹೆಚ್.ಕೆ, ಉಮೇಶ್‌,ಚಿದಾನಂದ,ಸಂಪತ್‌, ದಿವಾಕರ್‌, ಸಂತೋಷ್‌ ,ಕುಮಾರ್ಮಾಯಪ್ಪರವರು ಭಾಗವಹಿಸಿದ್ದರು. ಈ  ತಂಡಕ್ಕೆ ಪೊಲೀಸ್ಅಧೀಕ್ಷಕರು ನಗದು ಬಹುಮಾನ ಘೋಷಿಸಿರುವುದಾಗಿ ತಿಳಿದು ಬಂದಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top