ಕಡಬ: ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆ ಪೂರೈಸದ ಸರ್ಕಾರ: ಫೆಬ್ರವರಿ 10 ರಿಂದ ಮತ್ತೆ ಅನಿದಿಷ್ಟಾವಧಿ ಪ್ರತಿಭಟನೆ

ಕಡಬ: ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆ ಪೂರೈಸದ ಸರ್ಕಾರ: ಫೆಬ್ರವರಿ 10 ರಿಂದ ಮತ್ತೆ ಅನಿದಿಷ್ಟಾವಧಿ ಪ್ರತಿಭಟನೆ

Kadaba Times News
0

 ಕಡಬ : ವಿವಿಧ ಬೇಡಿಕೆ ಈಡೇರಿಕೆಗಾಗಿ ಕಳೆದ ಸೆಪ್ಟಂಬರ್ನಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಂದ ಅನಿರ್ದಿಷ್ಟಾವಧಿ   ಪ್ರತಿಭಟನೆ ಹಮ್ಮಿಕೊಂಡ ಸಂದರ್ಭದಲ್ಲಿ  ನೀಡಿದ ಭರವಸೆಯನ್ನು ಪೂರೈಸದ ಕಾರಣ  ಎರಡನೇ ಭಾರಿ  ಫೆಬ್ರವರಿ 10 ಕ್ಕೆ   ಮತ್ತೆ  ಅನಿದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮ ಆಡಳಿತ ಅಧಿಕಾರಿಗಳ  ತಾಲೂಕು    ಘಟಕದ  ವತಿಯಿಂದ  ಕಡಬ ತಹಶೀಲ್ದಾರ ಮೂಲಕ ರಾಜ್ಯ ಕಂದಾಯ ಸಚಿವರಿಗೆ  ಫೆ.6 ರಂದು  ಮನವಿ ನೀಡಲಾಗಿದೆ.

ತಹಶೀಲ್ದಾರ್ ಮೂಲಕ ರಾಜ್ಯ ಕಂದಾಯ ಸಚಿವರಿಗೆ  ಮನವಿ


 ಕಚೇರಿಗಳಲ್ಲಿ ಕಾರ್ಯನಿರ್ವಹಿಸಲು ಹಲವಾರು ಮೂಲಭೂತ ಸಮಸ್ಯೆಗಳಿದ್ದು, ಮುಖ್ಯವಾಗಿ ಮೊಬೈಲ್ ಆಪ್ ಮತ್ತು ವೆಬ್ ಅಪ್ಲಿಕೇಶನ್‌ಗಳ ಮೂಲಕ ಆಗುತ್ತಿರುವ ಸಮಸ್ಯೆ, ಇಲಾಖೆಯಿಂದ ಅಭಿವೃದ್ದಿ ಪಡಿಸಿರುವ ಸುಮಾರು 17 ಕ್ಕೂ ಹೆಚ್ಚು  ಮೊಬೈಲ್ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದು, ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯವಾಗಿರುವ ಮೊಬೈಲ್ ಸಾಧನ,  ಹಾಗು ಲ್ಯಾಪ್‌ಟಾಪ್ ಹಾಗು ಅದಕ್ಕೆ ಅವಶ್ಯಕವಾಗಿರುವ ಇಂಟರ್‌ನೆಟ್  ಹಾಗು ಸ್ಕ್ಯಾನರ್  ಗಳನ್ನು ಒದಗಿಸದೆ ಕರ್ತವ್ಯ ನಿರ್ವಹಿಸಲು ಒತ್ತಡ ಉಂಟಾಗುತ್ತಿದೆ.


ಅದ್ದರಿಂದ ನಮಗೆ ವೃತ್ತಕ್ಕೆ ಒಂದರಂತೆ ಮೊಬೈಲ್ ,ಲ್ಯಾಪ್‌ಟಾಪ್, ಗೂಗಲ್ ಕ್ರೋಮ್ ಬುಕ್ಕ್ , ಪ್ರಿಂಟರ್ , ಇಂಟರ್‌ನೆಟ್ ಸೌಲಭ್ಯ ನೀಡಬೇಕು , ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಅಕ್ಟೋಬರ್. 3 ರಂದು ಪ್ರತಿಭಟನೆ ವಾಪಸ್ಸು ತೆಗೆದುಕೊಳ್ಳಲಾಯಿತು.  ಆದರೆ ನಮಗೆ ನೀಡಿದ ಯಾವೂದೆ ಭರವಸೆಗಳನ್ನು ಈಡೇರಿಸಿಲ್ಲ ಹೀಗಾಗಿ  ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಕೇಂದ್ರ ಸಂಘದ ನಿರ್ಣಯದಂತೆ ಫೆ.10 ರಿಂದ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

 

ಸಂಘದ ಕಡಬ ತಾಲೂಕು ಘಟಕದ ಅಧ್ಯಕ್ಷ ಶೇಷಾದ್ರಿ ನೀಡಿದ ಮನವಿಯನ್ನು ಕಡಬ ಆಡಳಿತ ಕಚೇರಿಯ ಉಪ ತಹಶೀಲ್ದಾರ ಗೋಪಾಲ ಕಲ್ಲುಗುಡ್ಡೆ ಸ್ವೀಕರಿಸಿದರು. ಉಪತಹಶೀಲ್ದಾರ್ ಭೀಮಯ್ಯ ,ಸಂಘದ ಪದಾದಿಕಾರಿಗಳು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top