ಬಿಳಿನೆಲೆಯಲ್ಲಿ ದ್ವಿಚಕ್ರ ವಾಹನಕ್ಕೆ ಬೊಲೆರೋ ಡಿಕ್ಕಿ :ಸವಾರೆ ರಸ್ತೆಗೆ ಬಿದ್ದು ಗಾಯ,ಪ್ರಕರಣ ದಾಖಲು

ಬಿಳಿನೆಲೆಯಲ್ಲಿ ದ್ವಿಚಕ್ರ ವಾಹನಕ್ಕೆ ಬೊಲೆರೋ ಡಿಕ್ಕಿ :ಸವಾರೆ ರಸ್ತೆಗೆ ಬಿದ್ದು ಗಾಯ,ಪ್ರಕರಣ ದಾಖಲು

Kadaba Times News
0

 ದ್ವಿಚಕ್ರ ವಾಹನದಲ್ಲಿ ಮನೆ ಕಡೆಗೆ ಹೋಗುತ್ತಿದ್ದವರು ಕೈಕಂಬ ಕೋಟೆ ಸಾರು ಸೇತುವೆ ದಾಟಿ ಮುಂದೆ ಹೋಗುತ್ತಿದ್ದಂತೆ ಸುಬ್ರಹ್ಮಣ್ಯ ಕಡೆಯಿಂದ  ಬರುತ್ತಿದ್ದ ಬೊಲೆರೋ ವಾಹನ ಡಿಕ್ಕಿಯಾಗಿದೆ.

 

ಕಡಬ ಟೈಮ್ಸ್ (KADABA TIMES):ಬಿಳೆನೆಲೆ   ದ್ವಿಚಕ್ರ ಮತ್ತು ಬೊಲೆರೋ ವಾಹನದ ನಡುವೆ ಡಿಕ್ಕಿ ಸಂಭವಿಸಿ  ಮಹಿಳೆಯೋರ್ವರು ಗಾಯಗೊಂಡಿರುವ ಘಟನೆ ಮೇ.25ರಂದು ಸಂಜೆ ಬಿಳಿನೆಲೆಯಲ್ಲಿ ನಡೆದಿದೆ



ಬಿಳಿನೆಲೆ ಕಳಿಗೆ ನಿವಾಸಿ ಸತೀಶ ಎಂಬವರ ಪತ್ನಿ ರೇಖಾ ಗಾಯಗೊಂಡವರು. ಬಿಳಿನೆಲೆಯಿಂದ  ತನ್ನ ಹೋಂಡಾ ದ್ವಿಚಕ್ರ ವಾಹನದಲ್ಲಿ ಮನೆ ಕಡೆಗೆ ಹೋಗುತ್ತಿದ್ದವರು ಕೈಕಂಬ ಕೋಟೆ ಸಾರು ಸೇತುವೆ ದಾಟಿ ಮುಂದೆ ಹೋಗುತ್ತಿದ್ದಂತೆ ಸುಬ್ರಹ್ಮಣ್ಯ ಕಡೆಯಿಂದ ಅಕ್ಷತ್ ಶೆಟ್ಟಿ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೊಲೆರೋ ವಾಹನ ಡಿಕ್ಕಿಯಾಗಿದೆ.


ಘಟನೆಯಲ್ಲಿ  ದ್ವಿಚಕ್ರ ಸವಾರೆ ವಾಹನ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.  ಈ ಬಗ್ಗೆ ಸಂತೋಷ್ ಎಂಬವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಕೇಸು ದಾಖಲಾಗಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top