Electric Shock- ವಿದ್ಯುತ್ ಲೈನ್ ದುರಸ್ತಿ ವೇಳೆ ಶಾಕ್: ಪವರ್ ಮ್ಯಾನ್ ಆಸ್ಪತ್ರೆಗೆ ದಾಖಲು

Electric Shock- ವಿದ್ಯುತ್ ಲೈನ್ ದುರಸ್ತಿ ವೇಳೆ ಶಾಕ್: ಪವರ್ ಮ್ಯಾನ್ ಆಸ್ಪತ್ರೆಗೆ ದಾಖಲು

Kadaba Times News
0

KADAABA TIMES (ಕಡಬ ಟೈಮ್ಸ್): ಕರೆಂಟ್ ಲೈನ್ ದುರಸ್ತಿ  ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಶಾಕ್ ಹೊಡೆದು ಪವರ್ ಮ್ಯಾನ್  ಕೆಳಗೆ ಬಿದ್ದು ಗಾಯಗೊಂಡ ಘಟನೆ ಸುಳ್ಯದ  ಕಲ್ಲುಗುಂಡಿ ಸಂಪಾಜೆಯ ಕಡಪಾಲದಲ್ಲಿ ಮೇ 26 ಸೋಮವಾರ ಸಂಭವಿಸಿದೆ.


ಲೈನ್ ಮ್ಯಾನ್  ನವೀನ್ ಡಿಸೋಜಾ ವಿದ್ಯುತ್ ಶಾಕ್ ಗೆ  ಒಳಗಾದ ವ್ಯಕ್ತಿ ಎಂದು ತಿಳಿದು ಬಂದಿದೆ



ನಿರಂತರ ಮಳೆಯ ಹಿನ್ನೆಲೆ ಆ ಭಾಗದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿತ್ತು.ಸಮಸ್ಯೆ ನಿವಾರಿಸುವ ಸಲುವಾಗಿ ವಿದ್ಯುತ್ ಲೈನ್ ದುರಸ್ತಿಗೆ ಮುಂದಾದ ವೇಳೆ ಶಾಕ್ ಹೊಡೆದಿದೆ ಎಂಬ ಮಾಹಿತಿ ಲಭಿಸಿದೆ.


 ಆ ಭಾಗದ   ಊರವರು ಕೂಡಲೇ  ಆಂಬ್ಯುಲೆನ್ಸ್  ಸಹಾಯದೊಂದಿಗೆ ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ . ಹೆಚ್ಚಿನ ಮಾಹಿತಿ ಇನ್ನಷ್ಟೇ  ತಿಳಿದು ಬರಬೇಕಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top