ಕಡಬ: ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿದ ವ್ಯಕ್ತಿಯ ಶೆಡ್ ಧ್ವಂಸ ಮತ್ತು ಅಡಕೆತೋಟ ಕಡಿದು ನಾಶ ಮಾಡಿದ ದುರುಳರು

ಕಡಬ: ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿದ ವ್ಯಕ್ತಿಯ ಶೆಡ್ ಧ್ವಂಸ ಮತ್ತು ಅಡಕೆತೋಟ ಕಡಿದು ನಾಶ ಮಾಡಿದ ದುರುಳರು

Kadaba Times News
0

 ಕಡಬ ಟೈಮ್ಸ್ (KADABA TIMES): ಕಡಬ ಠಾಣಾ ವ್ಯಾಪ್ತಿಯ ಕಾಣಿಯೂರು ಸಮೀಪ  ದೋಳ್ಪಾಡಿ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ  ಸೇರಿದ ವ್ಯಕ್ತಿಯೊಬ್ಬರಿಗೆ ಸೇರಿದ ಶೆಡ್ ಮತ್ತು  ಕೃಷಿ ತೋಟವನ್ನು   ರಾತ್ರಿ ವೇಳೆ  ಸ್ಥಳೀಯರು ಎನ್ನಲಾದ ವ್ಯಕ್ತಿಗಳು ಕೆಡವಿ  ಧ್ವಂಸ ಮಾಡಿರುವ ಅಮಾವೀಯ   ಘಟನೆ ಜೂ.10 ರಂದು ನಡೆದಿದೆ.




ದೋಲ್ಪಾಡಿ ಗ್ರಾಮದ ಕಲೆಂಜೋಡಿಯಲ್ಲಿ  ಅಲ್ಲಿನ ನಿವಾಸಿಯೊಬ್ಬರಿಂದ   ಅವರ  ಪಟ್ಟ ಜಾಗದ ಬಳಿ ಚಾರ್ವಾಕ ಗ್ರಾಮದ ನಾಗಲೋಕ ನಿವಾಸಿ ಸುಂದರ ಅವರು ವರ್ಷಗಳ ಹಿಂದೆ ಹಣ ಕೊಟ್ಟು  ಜಾಗವನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ  ಸರ್ಕಾರಿ ಜಮೀನು ಸ್ವಾದೀನ ಪಡಿಸಿಕೊಂಡು ಶೆಡ್ ನಿರ್ಮಿಸಿ ಅಡಿಕೆ ತೋಟ ಕೂಡ  ನಿರ್ಮಿಸಿದ್ದರು.



ಆರಂಭದಲ್ಲಿ ಇದೇ ಜಾಗದಲ್ಲಿ (ಮೇ 22 ರಂದು)  ವ್ಯಕ್ತಿಯೊಬ್ಬರು   ಶೆಡ್ ಕೆಡವಿ ಮನೆ ಕಟ್ಟಲು ಮುಂದಾದ ವೇಳೆ  ಪೊಲೀಸರಿಗೆ ದೂರು ನೀಡಿದ್ದರು.  ಇದೀಗ ಜೂ 10 ರಂದು ರಾತ್ರಿ ವೇಳೆ ಬಂದು ನಿರ್ಮಾಣ ಹಂತದಲ್ಲಿದ್ದ  ಶೆಡ್  ನಾಶಗೊಳಿಸಿದಲ್ಲದೆ ಐವತ್ತಕ್ಕೂ  ಹೆಚ್ಚು  ಅಡಕೆ ಗಿಡಗಳನ್ನು  ಕಡಿದು ಹಾಕಲಾಗಿದೆ .



ಈ ಬಗ್ಗೆ  ಸುಂದರ ಎಂಬವರು ಮೂವರ ಹೆಸರು ಉಲ್ಲೇಖಿಸಿ   ಕಡಬ ತಹಶೀಲ್ದಾರ್ ಮತು ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.  ದೂರಿನ ಹಿನ್ನೆಲೆ ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೆ ಕೆಲವರಿಗೆ ಎಚ್ಚರಿಕೆ ನೀಡಿರುವುದಾಗಿ ತಿಳಿದು ಬಂದಿದೆ.  ಈ ನಡುವೆ     ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ  ಮತ್ತು   ಕಂದಾಯ ವಿಭಾಗದ  ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ.



ಠಾಣೆಗೆ  ಎರಡೆರಡು ಬಾರಿ ದೂರು ನೀಡಿದರೂ ದೂರುದಾರರು ಉಲ್ಲೇಖಿಸಿದ  ವ್ಯಕ್ತಿಗಳನ್ನು ಠಾಣೆಗೆ ಕರೆಸಿ ಇದುವರೆಗೂ ವಿಚಾರಣೆ ಮಾಡಿಲ್ಲ ಎಂದು ದೂರುದಾರ ಸುಂದರ ಅವರು ಆರೋಪಿಸಿದ್ದಾರೆ  . ದಲಿತಪರ ಸಂಘಟನೆಗಳ ಕೆಲ ಮುಖಂಡರು ಸಾಮಾಜಿಕ ಜಾಲತಾಣದ ಮೂಲಕ ಈ ಘಟನೆಗೆ ಸಂಬಂಧಿಸಿದಂತೆ  ಆಕ್ರೋಶ ವ್ಯಕ್ತಪಡಿಸಿದ್ದಾರೆ.  



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top