ಕುಕ್ಕೆ ಸುಬ್ರಹ್ಮಣ್ಯ |ನದಿಗೆ ಕಸ ಎಸೆದ ಯಾತ್ರಾರ್ಥಿಯ ಕಾರಿನ ಪೊಟೋ ವೈರಲ್: ಪೊಲೀಸರ ನೆರವಿನಲ್ಲಿ ಪತ್ತೆ ಹಚ್ಚಿ ದಂಡ ವಸೂಲಿ ಮಾಡಿದ ಗ್ರಾಮ ಪಂಚಾಯತ್

ಕುಕ್ಕೆ ಸುಬ್ರಹ್ಮಣ್ಯ |ನದಿಗೆ ಕಸ ಎಸೆದ ಯಾತ್ರಾರ್ಥಿಯ ಕಾರಿನ ಪೊಟೋ ವೈರಲ್: ಪೊಲೀಸರ ನೆರವಿನಲ್ಲಿ ಪತ್ತೆ ಹಚ್ಚಿ ದಂಡ ವಸೂಲಿ ಮಾಡಿದ ಗ್ರಾಮ ಪಂಚಾಯತ್

Kadaba Times News
0

ಕಡಬ ಟೈಮ್ಸ್ (KADABA TIMES): ಸುಬ್ರಹ್ಮಣ್ಯಕ್ಕೆ ಆಗಮಿಸಿದ ಯಾತ್ರಾರ್ಥಿಯೊಬ್ಬರು ನದಿಗೆ ಕಸ ಬಿಸಾಡಿದ್ದು, ಅವರನ್ನು ಪತ್ತೆ ಹಚ್ಚಿ ಅವರಿಂದ ದಂಡ ವಸೂಲಿ ಮಾಡಿದ ಘಟನೆ ಸುಬ್ರಹ್ಮಣ್ಯದಿಂದ ವರದಿಯಾಗಿದೆ.



ಜೂ. 9 ರಂದು ಬೆಂಗಳೂರಿನಿಂದ ಕಾರೊಂದರಲ್ಲಿ ಬಂದ ಯಾತ್ರಾರ್ಥಿಗಳು ಸುಬ್ರಹ್ಮಣ್ಯ ದ ಕುಮಾರಧಾರ ನದಿಯ ಸೇತುವೆಯ ಮೇಲೆಯಿಂದ ನದಿಗೆ ಕಸ ಬಿಸಾಡಿದ್ದು ಅದನ್ನು ಸ್ಥಳೀಯರೋರ್ವರು ಮೊಬೈಲಲ್ಲಿ ಚಿತ್ರ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.


ಇದನ್ನು ಗಮನಿಸಿ ಪರಿಗಣಿಸಿದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಯಾತ್ರಾರ್ಥಿಯ ವಾಹನದ ನಂಬರ್ ಆಧರಿಸಿ ಕಸ ಬಿಸಾಡಿದವರನ್ನು ಸಂಪರ್ಕಿಸಿ ರೂ.1000 ದಂಡನೆ ಹಾಕಿ ಅದನ್ನು ವಸೂಲಿ ಮಾಡಿರುವುದಾಗಿ ‌ತಿಳಿದು ಬಂದಿದೆ. ಸುಬ್ರಹ್ಮಣ್ಯ ಠಾಣೆಯ ಎಸ್.ಐ ಕಾರ್ತಿಕ್ ವಾಹನ ಪತ್ತೆ ಹಚ್ಚುವಲ್ಲಿ ಸಹಕರಿಸಿರುವುದಾಗಿದ್ದು ಈ ಕಾರ್ಯಕ್ಕೆ ಸಾರ್ವಜನಿಕರಿಂದ  ಶ್ಲಾಘನೆಯೂ ವ್ಯಕ್ತವಾಗಿದೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top