ಕಡಬ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಯತ್ನ ಪ್ರಕರಣ:ಆರೋಪಿಯನ್ನು ಕರೆದಂದು ಕೋಡಿಂಬಾಳದಲ್ಲಿ ರೈಲ್ವೇ ಪೊಲೀಸರಿಂದ ಸ್ಥಳ ಮಹಜರು

ಕಡಬ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಯತ್ನ ಪ್ರಕರಣ:ಆರೋಪಿಯನ್ನು ಕರೆದಂದು ಕೋಡಿಂಬಾಳದಲ್ಲಿ ರೈಲ್ವೇ ಪೊಲೀಸರಿಂದ ಸ್ಥಳ ಮಹಜರು

Kadaba Times News
0

 ಕಡಬ ಟೈಮ್ಸ್ (KADABA TIMES):  ದ.ಕ ಮಂಗಳೂರು-ಬೆಂಗಳೂರು ರೈಲು ಮಾರ್ಗದ ಕೋಡಿಂಬಾಳ ಸಮೀಪದ ಕೋರಿಯರ್ ರೈಲು ಟ್ರಾಕ್ ಸಮೀಪ ತನ್ನ ಅಣ್ಣನ ಮೇಲೆ ಪೆಟ್ರೋಲ್ ಸುರಿದು ತಮ್ಮ  ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ   ಘಟನೆ ಜೂ.8 ರಂದು  ನಡೆದಿತ್ತು.



ಗಂಭೀರವಾಗಿ ಗಾಯಗೊಂಡು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು  ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ನಿವಾಸಿ ಹನುಮಪ್ಪ (42) ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.


ಆತನ ಸಹೋದರ ನಿಂಗಪ್ಪ (21) ಈ ಕೃತ್ಯ ಎಸಗಿದ ಆರೋಪಿಯಾಗಿದ್ದು  ರೈಲ್ವೇ ಪೊಲೀಸರು ಕೊಲೆಯತ್ನ ಮೊದಲು  ಆರೋಪದಡಿ ಪ್ರಕರಣ ದಾಖಲಿಸಿದ್ದರು.ಇದೀಗ ಗಾಯಾಳುವಿನ ಸಾವಿನ ಬಳಿಕ  ಕೊಲೆ ಪ್ರಕರಣವಾಗಿ ಪ್ರಕರಣ ಬದಲಾಗಿದೆ. 


ಜೂ. 9 ರಂದು ಮಂಗಳೂರು ರೈಲ್ವೇ ಪೊಲೀಸರು ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಬಂದು ಮಹಜರು ನಡೆಸಿದ್ದಾರೆ.  ಮಂಗಳೂರು ವಿಭಾಗದ ರೈಲ್ವೇ ಪೊಲೀಸ್ ಇನ್ಸ್ಪೆಕ್ಟರ್ ಜಯಾನಂದ,  ಎಎಸ್ಐ ಮಧುಚಂದ್ರ, ವಿಧಿವಿಜ್ಞಾನ ತಂಡ ಹಾಗೂ ರೈಲ್ವೆ ಪೊಲೀಸರಿಂದ ತನಿಖೆ ಆರಂಭಗೊಂಡಿದೆ. 


ಮಾಹಿತಿಯ ಪ್ರಕಾರ ಪುತ್ತೂರಿನಲ್ಲಿ ರೈಲು ಹತ್ತಿದ ಇಬ್ಬರೂ  ಕೋಡಿಂಬಾಳ ರೈಲು ನಿಲ್ದಾಣದಲ್ಲಿ  ಮಧ್ಯಾಹ್ನ  ಇಬ್ಬರೂ ಇಳಿದಿದ್ದರು.  ಕೊಲೆಗೆ ಮೊದಲೇ ಪ್ಲಾನ್ ಮಾಡಿಕೊಂಡಿದ್ದ ತಮ್ಮ  ಸುತ್ತಮುತ್ತ ಮನೆಗಳಿರುವ  ಕಾರಣ  ರೈಲು ಮಾರ್ಗದಲ್ಲಿ ಮುಂದಕ್ಕೆ  ಸುಮಾರು ಒಂದು ಕಿ.ಮೀ  ನಡೆದುಕೊಂಡು ಹೋಗಿ ಕೋರಿಯಾರ್ ಪ್ರದೇಶಕ್ಕೆ ತಲುಪಿ ಪೆಟ್ರೋಲ್ ಮಿಶ್ರಿತ ಡೀಸೆಲ್ ಸುರಿದು ಬೆಂಕಿ ಹಚ್ಚಿರುವುದಾಗಿ ಹೇಳಲಾಗಿದೆ. ಪೊಲೀಸರ ತನಿಖೆಯಲ್ಲಿ ಹೆಚ್ಚಿನ ವಿವರ ಸಿಗಲಿದೆ.

 

ಅಣ್ಣನಿಗೆ ವಿಪರೀತ ಕುಡಿತದ ಚಟವಿತ್ತು. ಆತನ ಕಾಟದಿಂದಲೇ 14 ವರ್ಷಗಳ ಹಿಂದೆ ಆತನ ಹೆಂಡತಿ ಮನೆ ಬಿಟ್ಟು ಹೋಗಿದ್ದಳು. ಇತ್ತೀಚೆಗೆ ಕುಡಿದ ಮತ್ತಿನಲ್ಲಿ ನಮ್ಮ ತಾಯಿಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲು ಈತ ಯತ್ನಿಸಿದ್ದ. ಇಂದು ನನ್ನ ಜೊತೆಯೂ ಗಲಾಟೆ ಮಾಡಿದ. ಈ ಎಲ್ಲಾ ಹಿಂಸೆಯಿಂದ ರೋಸಿಹೋಗಿ ಅವನನ್ನು ಕೊಲೆ ಮಾಡಲು ನಿರ್ಧರಿಸಿದ್ದೆ, ಎಂದು  ಕಡಬ ಪೊಲೀಸರ ಮುಂದೆ ಆರೋಪಿ ನಿಂಗಪ್ಪ ತನ್ನ ತಪ್ಪನ್ನು ಒಪ್ಪಿಕೊಂಡಿದ್ದ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top