ಕಡಬ:ಇಚಿಲಂಪಾಡಿ ಸೇತುವೆ ಬಳಿ ಸ್ನಾನಕ್ಕೆಂದು ನದಿಗಿಳಿದ ಹೆಸರಾಂತ ಕಬಡ್ಡಿ ಆಟಗಾರ ನೀರಲ್ಲಿ ಮುಳುಗಿ ಮೃತ್ಯು

ಕಡಬ:ಇಚಿಲಂಪಾಡಿ ಸೇತುವೆ ಬಳಿ ಸ್ನಾನಕ್ಕೆಂದು ನದಿಗಿಳಿದ ಹೆಸರಾಂತ ಕಬಡ್ಡಿ ಆಟಗಾರ ನೀರಲ್ಲಿ ಮುಳುಗಿ ಮೃತ್ಯು

Kadaba Times News
0

ಕಡಬ ಟೈಮ್ಸ್ (KADABA TIMES) : ಉತ್ತಮ ಕಬಡ್ಡಿ, ಕ್ರಿಕೆಟ್ ಆಟಗಾರನೊಬ್ಬ ನದಿ ನೀರಲ್ಲಿ ಮುಳುಗಿ   ಮೃತಪಟ್ಟ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ  ರವಿವಾರ ಅಪರಾಹ್ನ ಸಂಭವಿಸಿದೆ.


ಮಂಗಳೂರಿನಲ್ಲಿ ಮೆಡಿಕಲ್ ರೆಪ್ ಆಗಿ ಉದ್ಯೋಗದಲ್ಲಿದ್ದ  ಇಚ್ಲಂಪಾಡಿ ಗ್ರಾಮದ ಕೆಡೆಂಬೇಲು ನಿವಾಸಿ ಜಯಾನಂದ ಶೆಟ್ಟಿ ಅವರ ಪುತ್ರ ಚೇತನ್ ಶೆಟ್ಟಿ (21) ಮೃತಪಟ್ಟವರು. 

ಮೃತ ಯುವಕ  ಚೇತನ್ ಶೆಟ್ಟಿ( KADABA TIMES)


ರವಿವಾರ ಇಚ್ಲಂಪಾಡಿಯಲ್ಲಿ ಯುವಕರ  ತಂಡದ ಜತೆಗೂಡಿ ಕ್ರಿಕೆಟ್ ಆಟವಾಡಿ ಬಳಿ ಅಪರಾಹ್ನದ ವೇಳೆಗೆ ಇಚ್ಲಂ ಪಾಡಿಯ ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕೆಂದು ನದಿಗೆ ಇಳಿದಿದ್ದರು.  ವೇಳೆ ನೀರಿನ ಆಳ ಅರಿಯದೆ ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.


ಸ್ಥಳೀಯರಾದ ಜಾಯ್ ಎಂಬವರು  ಮೃತದೇಹವನ್ನು ನೀರಿನಿಂದ ಮೇಲೆತ್ತಿದರು. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಕಡಬ ಸಮುದಾಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಚೇತನ್ ಅವರು ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣಾ ಯು ಡಿ ಆರ್ ನಂಬ್ರ 13/2025 ಕಲಂ:194 BNSS-2023. ಯಂತೆ ಪ್ರಕರಣ ದಾಖಲಾಗಿರುತ್ತದೆ.


ಇದೇ ವ್ಯಾಪ್ತಿಯಲ್ಲಿ   ಮರಳುಗಾರಿಕೆಯೂ ನಡೆಯುತ್ತಿದ್ದು ನದಿ ನೀರಿನ ಆಳದಿಂದ  ಮರಳು ತೆಗೆದ ಹಿನ್ನೆಲೆ  ಗುಂಡಿಯ  ಆಳ ಗೋಚರಿಸದೆ ಮುಳುಗಿರಬಹುದೆ ಎಂಬ  ಶಂಕೆಯೂ ವ್ಯಕ್ತವಾಗಿದೆ . ಇನ್ನು ಸೇತುವೆ ಮೇಲ್ಬಾಗದಲ್ಲಿ ಅಕ್ರಮ ಮರಳು ತೆಗೆದ ಜಾಗದ ವ್ಯಾಪ್ತಿಯಲ್ಲಿ  ಕೆಲ ವರ್ಷಗಳ ಹಿಂದೆ  ಸ್ನಾನಕ್ಕೆಂದು ಇಳಿದ  ಇಬ್ಬರು  ಯುವಕರು ನೀರುಪಾಲಾಗಿದ್ದರು. ಇಚಿಲಂಪಾಡಿಯ ಈ ಹೊಳೆ ತಟದಲ್ಲಿ ಈಜಿಗಾಗಿ ನದಿ ನೀರಿಗೆ ಇಳಿಯದಂತೆ ಸ್ಥಳೀಯಾಡಳಿತ ಎಚ್ಚರಿಕೆ ಫಲಕ ಹಾಕಬೇಕೆಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top