ಕಡಬ: ದಿಢೀರ್ ಕುಸಿದು ಬಿದ್ದು ಅಸ್ಪಸ್ಥಗೊಂಡಿದ್ದ ಕೃಷಿಕ ಆಸ್ಪತ್ರೆಯಲ್ಲಿ ಸಾವು

ಕಡಬ: ದಿಢೀರ್ ಕುಸಿದು ಬಿದ್ದು ಅಸ್ಪಸ್ಥಗೊಂಡಿದ್ದ ಕೃಷಿಕ ಆಸ್ಪತ್ರೆಯಲ್ಲಿ ಸಾವು

Kadaba Times News
0

 ಕಡಬ ಟೈಮ್ಸ್ ( Kadaba times):  ಕಡಬ ಗ್ರಾಮದ ಪಿಜಕ್ಕಳದ ಕೃಷಿಕರೊಬ್ಬರು ಕುಸಿದು ಬಿದ್ದು ಅಸ್ಪಸ್ಥಗೊಂಡು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.



ಕಡಬ ಪ.ಪಂ ವ್ಯಾಪ್ತಿಯ ಗೊಡಾಲು ನಿವಾಸಿ ಕೃಷಿಕ ಯತೀಂದ್ರ ಗೌಡ(49.ವ) ಮೃತಪಟ್ಟವರು. 


ಆ.23ರಂದು ತನ್ನ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಅವರು ಮನೆಗೆ ಊಟಕ್ಕೆಂದು ಬಂದಿದ್ದರು.ಊಟ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ದಿಡೀರ್ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದು ಎನ್ನಲಾಗಿದೆ. 

ಕೂಡಲೇ  ಕಡಬ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು(ಆ.24) ಬೆಳಿಗ್ಗೆ ಮೃತಪಟ್ಟಿದ್ದಾರೆ. 


ಕೃಷಿಕರಾಗಿ ಬಹಳ ಶ್ರಮಜೀವಿಯಾಗಿದ್ದ ಯತೀಂದ್ರ ಅವರು ಪ್ರಯೋಗಶೀಲ ಕೃಷಿಯನ್ನು ಮಾಡಿ ಜನಾನುರಾಗಿಯಾಗಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top