ಕಡಬ ಟೈಮ್ಸ್, ಸುಬ್ರಹ್ಮಣ್ಯ : ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಮೈದಾನದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ಪಿಡಿಒ ದಾಳಿ ನಡೆಸಿ ಕ್ರಿಕೆಟ್ ಆಟಕ್ಕೆ ಬಳಸುತಿದ್ದ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಘಟನೆ ನಿನ್ನೆ ಸಂಜೆ ನಡೆದಿದ್ದು
ಕೊಲ್ಲಮೊಗ್ರು ಗ್ರಾಮದ ತೋಟದಮಜಲು, ಕಟ್ಟ, ಗಡಿಕಲ್ಲು ಸ್ಥಳದಲ್ಲಿ ಕೆಲ ಯುವಕರು, ಬಾಲಕರು ಸೇರಿ ಕ್ರಿಕೆಟ್ ಆಡುತ್ತಿದ್ದುದು ಗಮನಕ್ಕೆ ಬಂದಿತ್ತು. ಗ್ರಾ.ಪಂ. ಪಿಡಿಒ ರವಿಚಂದ್ರ ಮತ್ತು ಸಿಬ್ಬಂದಿ ಸಂತೋಷ್ ಅಲ್ಲಿಗೆ ತೆರಳಿದ್ದಾರೆ.
ಈ ವೇಳೆ ಕ್ರಿಕೆಟ್ ಆಡುತ್ತಿದ್ದವರು ಬ್ಯಾಟ್, ವಿಕೆಟ್, ಬಾಲ್ ಬಿಟ್ಟು ಓಡಿದ್ದು ಅವುಗಳನ್ನುವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.


