ಕಡಬ ಟೈಮ್ಸ್ ,ಪುತ್ತೂರು: ಕಪ್ಪು ಬಣ್ಣದ ಪಲ್ಸರ್ ಬೈಕಲ್ಲಿ ಬಂದ ಮೂವರು ಅಪರಿಚಿತ ಯುವಕರು ಮಹಿಳೆಯೋರ್ವರ ಕರಿಮಣಿ ಸರ ಎಳೆದು ಪರಾರಿಯಾದ ಘಟನೆ ಮೇ 30ರಂದು ಮಧ್ಯಾಹ್ನ ತೆಂಕಿಲದಲ್ಲಿ ನಡೆದಿದೆ.
ತೆಂಕಿಲದ ಮಹಿಳೆಯೋರ್ವರು ಬೈಪಾಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಪರಿಚಯದವರಂತೆ ನಟಿಸಿ ಈ ಕೃತ್ಯ ಎಸಗಲಾಗಿದೆ.
ಮಹಿಳೆ ತಕ್ಷಣ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಯುವಕರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.


