ಕಡಬ ಟೈಮ್ಸ್ ,ನೆಲ್ಯಾಡಿ: ವಿದ್ಯುತ್ ಶಾಕ್ ಗೆ ಒಳಗಾಗಿ ತಾಯಿ ಮತ್ತು ಮಗು ದಾರುಣವಾಗಿ ಮೃತಪಟ್ಟ ಘಟನೆ ಮೇ.30 ರಂದು ಬೆಳಿಗ್ಗೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಪಟ್ರಮೆ ಎಂಬಲ್ಲಿ ನಡೆದಿದೆ.
ಪಟ್ರಮೆ ಕೋಡಂದೂರು ನಿವಾಸಿ ಹರೀಶ್ ಎಂಬವರ ಪತ್ನಿ ಗೀತಾ(30ವ.)ಹಾಗೂ ಅವರ ನಾಲ್ಕೂವರೇ ವರ್ಷದ ಮಗು ಭವಿಷ್ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಬೆಳಿಗ್ಗೆ 10 ಗಂಟೆ ವೇಳೆಗೆ ಗೀತಾರವರು ಮಗು ಭವಿಷ್‌ನನ್ನು ಹಿಡಿದುಕೊಂಡು ಪಂಪ್ ಸ್ವಿಚ್ ಆನ್ ಮಾಡಲು ಹೋಗಿದ್ದ ವೇಳೆ ವಿದ್ಯುತ್ ಅಘಾತಕ್ಕೆ ಒಳಗಾಗಿ ತಾಯಿ ಹಾಗೂ ಮೃತಪಟ್ಟಿರುವುದಾಗಿ ವರದಿಯಾಗಿದೆ. ಹೆಚ್ಚಿನ ವಿವರ ಲಭ್ಯವಾಗಿಲ್ಲ.


