ರಬ್ಬರ್ ತೋಟದ ನಡುವೆ ಅಕ್ರಮ ಕಸಾಯಿಖಾನೆ:ಓರ್ವ ಪೊಲೀಸ್ ವಶಕ್ಕೆ

ರಬ್ಬರ್ ತೋಟದ ನಡುವೆ ಅಕ್ರಮ ಕಸಾಯಿಖಾನೆ:ಓರ್ವ ಪೊಲೀಸ್ ವಶಕ್ಕೆ

Kadaba Times News
0

ಕಡಬ ಟೈಮ್ಸ್, ಕೊಕ್ಕಡ : ಶಿಬಾಜೆ ಗ್ರಾಮದ ತುಂಬೆತ್ತಡ್ಡ ಎಂಬಲ್ಲಿ ರಬ್ಬರ್ ತೋಟದ ನಡುವೆ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಧರ್ಮಸ್ಥಳ ಪೊಲೀಸ್ ದಾಳಿ ನಡೆಸಿ ಓವ೯ ಆರೋಪಿಯನ್ನು ಬಂಧಿಸಿದ ಘಟನೆ ವರದಿಯಾಗಿದೆ.

ಸ್ಥಳೀಯ ಬಜರಂಗದಳದ ಕಾರ್ಯಕರ್ತರ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಈ ದಾಳಿ ನಡೆಸಿದ್ದು, ಈ ವೇಳೆ ಒಬ್ಬ ಆರೋಪಿ ತೋಮಸ್ ಯಾನೆ ಸನ್ನಿ ಎಂಬವರನ್ನು ಬಂಧಿಸಲಾಗಿದೆ.

ಸುಮಾರು 75 ಕೆಜಿ ಯಷ್ಟು ದನದ ಮಾಂಸ ಮತ್ತು ಇತರ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.ಕೋವಿಡ್-19 ಮಹಾಮಾರಿ ಕಾಯಿಲೆಯ ಸಂದರ್ಭದಲ್ಲೂ ಅಕ್ರಮ ಕಸಾಯಿಖಾನೆಯ ನಡೆಯುತ್ತಿರುವುದು ಅತ್ಯಂತ ದುಃಖಕರವಾದ ಸಂಗತಿಯಾಗಿದೆ ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top