ಗುಳಿಗ ಬನ ಪ್ರದೇಶವನ್ನು ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡ ವ್ಯಕ್ತಿ:ತೆರವಿಗೆ ಸೂಚಿಸಿದ ಸಹಾಯಕ ಆಯುಕ್ತರು

ಗುಳಿಗ ಬನ ಪ್ರದೇಶವನ್ನು ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡ ವ್ಯಕ್ತಿ:ತೆರವಿಗೆ ಸೂಚಿಸಿದ ಸಹಾಯಕ ಆಯುಕ್ತರು

Kadaba Times News
0

ಕಡಬ ಟೈಮ್ಸ್, ಈಶ್ವರಮಂಗಲ: ನೆಟ್ಟಣಿಗೆ ಮುಡ್ನೂರು ಗ್ರಾಮದ  ಪುಳಿಮರಡ್ಕ ಎಂಬಲ್ಲಿ ಸ್ಥಳೀಯರು ಅನಾದಿ ಕಾಲದಿಂದ  ಆರಾಧಿಸುತ್ತಿದ್ದ ಗುಳಿಗ ಬನ ಪ್ರದೇಶವನ್ನು ಸ್ಥಳೀಯ ವ್ಯಕ್ತಿಯೊಬ್ಬರು ಸ್ವಾಧೀನ ಪಡೆದುಕೊಂಡಿದ್ದಾರೆ.

ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಪುತ್ತೂರು ಸಹಾಯಕ ಕಮಿಷನರ್‌ರವರು ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿ  ಅಕ್ರಮ ಸ್ವಾಧೀನವನ್ನು ತೆರವು ಮಾಡುವಂತೆ  ಸೂಚಿಸಿದ್ದಾರೆ.ಅಲ್ಲದೆ  ಅಕ್ರಮ ಸ್ವಾಧೀನಕ್ಕೆ ಅವಕಾಶ ನೀಡಿದ ಸ್ಥಳೀಯ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರೆಂದು ತಿಳಿದು ಬಂದಿದೆ.

ಭೂಮಿಯ ಅಕ್ರಮ ಭೂ ಸ್ವಾಧೀನ ಸ್ಪಷ್ಟವಾಗಿದ್ದು ಈ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ಬನಕ್ಕೆ ಸಂಬಧಿಸಿದ ಜಾಗಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಅವಕಾಶ ಇರಬೇಕು. ಸ್ಥಳೀಯರ ಆರಾಧನೆಗೆ ಯಾವುದೇ ತೊಂದರೆ ಆಗಬಾರದು. ತಕ್ಷಣ ಸ್ವಾಧೀನ ತೆರವು ಗೊಳಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಡಾ.ಯತೀಶ್ ಉಳ್ಳಾಲ್ ಆದೇಶಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top