ಕಡಬ ಟೈಮ್ಸ್, ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಮುಕ್ತಿದಾಮದಲ್ಲಿ (ಶವಾಗಾರ) ಕಟ್ಟಿಗೆ ಸಂಗ್ರಹಿಸಿ ಇಡಲಾಗಿದೆ.
ಕಟ್ಟಿಗೆ ಕೊರತೆ ಉಂಟಾಗಬಾರದು ಎಂಬ ದೃಷ್ಟಿಯಿಂದ ಜೂ.1 ರಂದು ವಿವಿಧ ಸಂಘಟನೆಗಳ ಕಾರ್ಯಕರ್ತರು ಕಾಡಿನ ಭಾಗದಲ್ಲಿ ಒಣಗಿದ ಮರಗಳ ತುಂಡುಗಳನ್ನು ಸಂಗ್ರಣೆ ಮಾಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಸೇವಾಭಾರತಿ, ಯುವಬ್ರಿಗೇಡ್, ಹಿಂದೂ ಸಂಘಟನೆ ಯುವಕರ ತಂಡ, ಸ್ಥಳೀಯ ಸಂಘ ಸಂಸ್ಥೆ ,ಅಟೋ ಚಾಲಕರು ಸೇರಿಕೊಂಡು ಈ ಕಾರ್ಯ ಮಾಡಿದ್ದಾರೆ.


