ಕಡಬ ಟೈಮ್ಸ್, ಪಂಜ: ಜನಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಸರಕಾರ 7 ವರ್ಷ ಪೂರೈಸಿದೆ.
ಈ ನಿಟ್ಟಿನಲ್ಲಿ ಸೋಂಕು ಪೀಡಿತರ ಹಾರೈಕೆಯಲ್ಲಿ ತೊಡಗಿಸಿಕೊಂಡಿರುವ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಳ್ಯ ಸಾ ಭಾಜಪ ಸಾಮಾಜಿಕ ಜಾಲತಾಣ ಪ್ರಕೋಷ್ಟದ ವತಿಯಿಂದ ಮಾಸ್ಕ್, ಕೈಗವಚ, ಹ್ಯಾಂಡ್ ಸ್ಯಾನಿಟೈಝೆರ್ ,ಝಿಂಕ್ ಮತ್ತು ವಿಟಮಿನ್ ಮಾತ್ರೆಗಳನ್ನು ನೀಡಲಾಯಿತು.
ಈ ಸಂಧರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಸೋಷಿಯಲ್ ಮೀಡಿಯಾ ಸಂಚಾಲಕ ಫಯಾಜ್ ಕಡಬ, ಸಹ ಸಂಚಾಲಕ ಸುಪ್ರೀತ್ ಮೊಂಟಡ್ಕ, ಸೋಷಿಯಲ್ ಮೀಡಿಯಾ ಜಿಲ್ಲಾ ಸಮಿತಿ ಸದಸ್ಯರಾದ ರವಿವರ್ಮ ಅಲೆಕ್ಕಾಡಿ ,ಸುಹಾಸ್ ಅಲೆಕ್ಕಾಡಿ ಉಪಸ್ಥಿತರಿದ್ದರು.


