ಆಲಂಕಾರು: ಅನಾರೋಗ್ಯದಿಂದ ಆಟೋ ಚಾಲಕ ಮೃತ್ಯು: ಠಾಣೆಯಲ್ಲಿ ಪ್ರಕರಣ ದಾಖಲು

ಆಲಂಕಾರು: ಅನಾರೋಗ್ಯದಿಂದ ಆಟೋ ಚಾಲಕ ಮೃತ್ಯು: ಠಾಣೆಯಲ್ಲಿ ಪ್ರಕರಣ ದಾಖಲು

Kadaba Times News
0

 ಕಡಬ: ಅನಾರೋಗ್ಯದಿಂದ ಆಟೋ ಚಾಲಕರೊಬ್ಬರು ಮೃತಪಟ್ಟ ಘಟನೆ ಕಡಬ ಠಾಣಾ ವ್ಯಾಪ್ತಿಯ ಹಳೆನೇರೆಂಕಿ ಗ್ರಾಮದಿಂದ ವರದಿಯಾಗಿದೆ.


ಆಲಂಕಾರು ಸಮೀಪದ ಹಳೆನೇರೆಂಕಿ ಗ್ರಾಮದ ಮುಳಿಮಜಲು ನಿವಾಸಿ   ಸೂರಪ್ಪ ಗೌಡ (60ವ)ಮೃತಪಟ್ಟವರು.



ಆಟೋ ಚಾಲಕರಾಗಿದ್ದ ಇವರು  ತಮ್ಮ  ಮನೆಯಲ್ಲಿ ಇರುವಾಗ ಅನಾರೊಗ್ಯ ಕಾಣಿಸಿಕೊಂಡಿದ್ದರಿಂದ ಆಲಂಕಾರಿನ  ಖಾಸಗಿ ಕ್ಲಿನಿಕಗೆ ಕರೆದುಕೊಂಡು ಹೋಗಿದ್ದರು.ಅಲ್ಲಿ     ವೈದ್ಯರು ಪರಿಕ್ಷೀಸಿ ಹೆಚ್ಚಿನ ಚಿಕಿತ್ಸೆಗಾಗಿ  ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು.

 

ಅದರಂತೆ  108 ಆಂಬುಲೆನ್ಸ್ ನಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರು ಪರಿಕ್ಷೀಸಿದಾಗ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರ ಮಗ  ಶ್ರೀಕಾಂತ  ಎಂಬರು ನೀಡಿದ ದೂರಿನಂತೆ  ಕಡಬ ಪೊಲೀಸ್‌‌ ಠಾಣಾ ಯು ಡಿ ಆರ್‌ 24/2024 ಕಲಂ:194 ಬಿ.ಎನ್.ಎಸ್.ಎಸ್ -2023. ಯಂತೆ ಪ್ರಕರಣ ದಾಖಲಾಗಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top