VIDEO+NEWS- ಕಡಬದಲ್ಲಿ ತಡರಾತ್ರಿ ಸ್ಕೂಟಿ ಕದಿಯಲು ಯತ್ನಿಸಿದಾತ ಕಳ್ಳನೊ ಸುಬಗನೊ?: ಸಿಸಿಟಿವಿಯಲ್ಲಿ ನೋಡಿ ಆತನ ಕರಾಮತ್ತು

VIDEO+NEWS- ಕಡಬದಲ್ಲಿ ತಡರಾತ್ರಿ ಸ್ಕೂಟಿ ಕದಿಯಲು ಯತ್ನಿಸಿದಾತ ಕಳ್ಳನೊ ಸುಬಗನೊ?: ಸಿಸಿಟಿವಿಯಲ್ಲಿ ನೋಡಿ ಆತನ ಕರಾಮತ್ತು

Kadaba Times News
0

 ಕಡಬ: ನಿಲ್ಲಿಸಿದ್ದ ಸ್ಕೂಟಿಯನ್ನು ಅಪರಿಚಿತನೋರ್ವ ಬಹುದೂರ ಕೊಂಡೊಯ್ದು ಬಳಿಕ ವಾಹನವನ್ನು ರಸ್ತೆಯಲ್ಲೇ ನಿಲ್ಲಿಸಿ ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಸಿಸಿಟಿವಿ ದೃಶ್ಯದ ಮೂಲಕ ಆತನ ಜಲನವಲನ  ಪತ್ತೆಯಾಗಿದೆ.


ಆ.1(ಗುರುವಾರ) ದಂದು ತಡ ರಾತ್ರಿ ಈ ಘಟನೆ ನಡೆದಿದ್ದು ಗಣಪತಿ ದೇವಸ್ಥಾನದ ಬಳಿ ಇರುವ ಇ ಕಾಮರ್ಸ್ ಸಂಸ್ಥೆ ನಿರ್ವಹಿಸುತ್ತಿರುವ  ರಂಜಿತ್ ಎಂ ಎಂಬವರ ಸ್ಕೂಟಿಯನ್ನು ಅಪರಿಚಿತ ಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.


ತಡ ರಾತ್ರಿ ತನ್ನ ಸಂಸ್ಥೆಗೆ  ಪಾರ್ಸೆಲ್ ಬರುವ ಹಿನ್ನೆಲೆ ರಂಜಿತ್ ಅವರು  ಸ್ಕೂಟಿಯನ್ನು ತನ್ನ ಕಚೇರಿ ಬಳಿ ನಿಲ್ಲಿಸಿ ಕೀ ಯನ್ನು ಅದರಲ್ಲೇ ಇಟ್ಟಿದ್ದರು.  ಕಚೇರಿಯ ಒಳಗೆ ಕೂತು ಕೆಲಸ ಮಾಡುತ್ತಿದ್ದ ವೇಳೆ ಸ್ಕೂಟರ್ ನ ಶಬ್ದ ಕೇಳಿ ಹೊರ ಬಂದಾಗ ತನ್ನ ಸ್ಕೂಟಿ ಕೊಂಡು ಹೋಗುತ್ತಿರುವುದು ಗೊತ್ತಾಗಿದೆ.



ತನ್ನ ಸ್ನೇಹಿತರು ಕೊಂಡು ಹೋದರೆಂದು ಭಾವಿಸಿ ಕೆಲ ಹೊತ್ತು ಕಾದು ಬಳಿಕ ಕೆಲವರಿಗೆ ಪೋನಾಯಿಸಿದ್ದರು. ಯಾರೋ ಅಪರಿಚಿತರು ಕೊಂಡು ಹೋಗಿರುವುದು ಗಮನಕ್ಕೆ ಬರುತ್ತಲೇ ಸಿಸಿಟಿ ಪರಿಶೀಲಿಸಿದ್ದಾರೆ.


ಕೂಡಲೇ ಹುಡುಕಾಡುತ್ತಾ ಹೋದಾಗ ಸ್ಕೂಟಿಯನ್ನು ಪಟ್ಟಣ ಪಂಚಾಯತ್ ಕಚೇರಿ ಬಳಿ ಬಿಟ್ಟು ಆತ ಎಸ್ಕೇಪ್ ಆಗಿದ್ದಾನೆ. ಮರು ದಿನ ಕಡಬ ಪೇಟೆಯ ಹಲವು ಅಂಗಡಿಗಳ ಸಿಸಿಟಿ ಪರಿಶೀಲಿಸಿದ್ದು ಈ ವೇಳೆ ಆತ ಕಡಬ ಮುಖ್ಯ ರಸ್ತೆಯ ಮೂಲಕ ಓಡುತ್ತಾ ಮುಂದೆ ಸಾಗಿ  ಬಾರೊಂದರ ಸನೀಹದಿಂದ  ಸಾಗಿ ತಲೆ ಮರೆಸಿಕೊಂಡಿರುವುದು  ಸಿಸಿಟಿವಿ ದೃಶ್ಯದಲ್ಲಿದೆ.  



Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top