Google pay scam| ಗೂಗಲ್ ಪೇ ಸ್ಕ್ಯಾನ್ ಮಾಡಿ ಹಣ ಬೇಕೆಂದು ಹೇಳಿ ಎರಡು ಅಂಗಡಿಗಳಿಂದ ಆರು ಸಾವಿರ ಕೊಂಡು ಹೋದ್ರು!

Google pay scam| ಗೂಗಲ್ ಪೇ ಸ್ಕ್ಯಾನ್ ಮಾಡಿ ಹಣ ಬೇಕೆಂದು ಹೇಳಿ ಎರಡು ಅಂಗಡಿಗಳಿಂದ ಆರು ಸಾವಿರ ಕೊಂಡು ಹೋದ್ರು!

Kadaba Times News
0
ಕಡಬ ಟೈಮ್ಸ್, ಸುಳ್ಯ: ಕಾರಿನಲ್ಲಿ ಬಂದ ತಂಡವೊಂದು ಮೂರು ಕಡೆ ಗೂಗಲ್ ಪೇ ಮಾಡುವುದಾಗಿ ತಿಳಿಸಿ ಹಣ ಪಡೆದು ಪರಾರಿಯಾದ ಘಟನೆ ಸುಳ್ಯದಿಂದ ವರದಿಯಾಗಿದೆ.


ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ನ.20ರಂದು ಈ ಘಟನೆ ಬೆಳಕಿಗೆ ಬಂದಿದ್ದು, ನ.19ರಂದು ಬಿಳಿ ಬಣ್ಣದ ಕಾರೊಂದರಲ್ಲಿ ಬಂದ ಐವರು ವ್ಯಕ್ತಿಗಳಲ್ಲಿ ಒಬ್ಬಾತ ಕಲ್ಲುಗುಂಡಿಯ  ಹೋಟೆಲೊಂದಕ್ಕೆ  ಬಂದು ತನಗೆ ಮೂರು ಸಾವಿರ ರೂ. ನಗದು ಹಣ ಬೇಕು. ನಾನು ಗೂಗಲ್ ಪೆ ಮಾಡುವುದಾಗಿ ಹೇಳಿದ್ದ. ಆಗ ಹೋಟೆಲ್ ಮಾಲಕ ತನ್ನ ಬಳಿ ಅಷ್ಟೊಂದು ನಗದು ಹಣ ಇಲ್ಲ ಎಂದು ಹೇಳಿದರೆನ್ನಲಾಗಿದೆ. ಆಗ ಬಂದಿದ್ದ ವ್ಯಕ್ತಿ ತಮ್ಮ ಬಳಿ ಇದ್ದ ನಗದು ಹಣ ಖಾಲಿ ಆಗಿದೆ ಎಂದು ಹೇಳಿದ್ದ


ಈ ಸಂದರ್ಭದಲ್ಲಿ ಹೋಟೆಲಲ್ಲಿದ್ದ ಕನಕಮಜಲಿನ ವ್ಯಕ್ತಿಯೊಬ್ಬರು  ತನ್ನ ಬಳಿಯಲ್ಲಿದ್ದ ಮೂರು ಸಾವಿರ ನಗದು ಹಣ ನೀಡಿದರೆನ್ನಲಾಗಿದೆ. ಆ ವ್ಯಕ್ತಿ ಹಣ ಪಡೆದು ಗೂಗಲ್ ಪೇ ಮಾಡಿದೆ ಎಂದು ತನ್ನ ಮೊಬೈಲ್ ಸುರೇಶ್ ಅವರಿಗೆ ತೋರಿಸರೆನ್ನಲಾಗಿದೆ. ಆಗ ಮೊಬೈಲಲ್ಲಿ ರೈಟ್ ಮಾರ್ಕ್ ಬಂದದ್ದು ಗಮನಿಸಿ,  ಅಲ್ಲಿಂದ ತೆರಳಿದ್ದರು.

ಕಾರಲ್ಲಿ ಬಂದ ಇದೇ ತಂಡದ ಯುವಕ ಕಲ್ಲುಗುಂಡಿಯ ಬಳಿ  ಮೀನು ಮಾರುಕಟ್ಟೆಗೆ ಹೋಗಿ ತಮಗೆ ಮೂರು ಸಾವಿರ ನಗದು ಹಣ ಬೇಕು. ತಾನು ಸ್ಕ್ಯಾನ್ ಮೂಲಕ ಗೂಗಲ್ ಪೆ ಮಾಡುವುದಾಗಿ ಹೇಳಿದ ಮೇರೆಗೆ ಮೀನು ವ್ಯಾಪಾರಿ ಆ ವ್ಯಕ್ತಿಗೆ ಮೂರು ಸಾವಿರ ನಗದು ನೀಡಿದರೆನ್ನಲಾಗಿದೆ. ಆಗ ಆ ವ್ಯಕ್ತಿ ತಾನು ಗೂಗಲ್ ಪೇ ಮಾಡಿದೆ ಎಂದು  ತೋರಿಸಿ ತೆರಳಿದ್ದ.


ಈ ಘಟನೆಯ ಬಳಿಕ ಅಶೋಕ ಕನಕಮಜಲು ಅವರು ತಮ್ಮ ಬ್ಯಾಲೆನ್ಸ್ ನೋಡುವಾಗ ತಮ್ಮ ಅಕೌಂಟಿಗೆ ಹಣ ಬಂದಿರಲಿಲ್ಲ. ಇದೇ ರೀತಿ ಅರುಣ್ ಅವರ ಅಕೌಂಟಿಗೂ ಹಣ ಬಂದಿರಲಿಲ್ಲ.

ಗುರುವಾರ  ಮತ್ತೆ ಕಲ್ಲುಗುಂಡಿ ಜೀವ ಮೆಡಿಕಲ್ ಶಾಪೊಂದಕ್ಕೆ ಸ್ಕೂಟಿಯಲ್ಲಿ ಬಂದ ಯುವಕನೊಬ್ಬ ತನಗೆ ಒಂದು ಸಾವಿರ ನಗದು ಹಣ ಬೇಕು, ತಾನು ಗೂಗಲ್ ಪೆ ಮಾಡುವುದಾಗಿ ಹೇಳಿದರೆನ್ನಲಾಗಿದೆ. ಆಗ ಮೆಡಿಕಲ್ ಶಾಪ್ ನಲ್ಲಿದ್ದ ಮಹಿಳೆ ಸ್ಕ್ಯಾನ್ ಮಾಡಿ ಹಣ ಹಾಕಿ ಎಂದು ಹೇಳಿದಾಗ ಯುವಕ ಸ್ಕ್ಯಾನ್ ಮಾಡಿದರೆನ್ನಲಾಗಿದೆ. ಆದರೆ ಅಕೌಂಟಿಗೆ ಹಣ ವರ್ಗಾವಣೆಯಾದ ಶಬ್ದ ಬರದಿದ್ದಾಗ ಮೆಡಿಕಲ್ ಶಾಪಿನ ಮಹಿಳೆಗೆ ಅನುಮಾನ ಬಂದು, ಅಕ್ಕಪಕ್ಕದವರು ಸ್ಥಳದಲ್ಲಿ ಸೇರತೊಡಗಿದಾಗ ಆ ಯುವಕ ತಾನು ಬಂದಿದ್ದ ಸ್ಕೂಟಿಯಲ್ಲಿ ಅಲ್ಲಿಂದ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.

ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ತಲಾ ಮೂರು ಸಾವಿರದಂತೆ ಒಟ್ಟು ಆರು ಸಾವಿರ ಹಣ ಕಳೆದು ಮೋಸ ಹೋಗಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top