ಕಡಬ: ಬಸ್ಸು ಬಂತೆಂದು ಅವಸರದಲ್ಲಿ ಓಡುವ ವೇಳೆ ವಿದ್ಯಾರ್ಥಿನಿಗೆ ಕಾರು ಡಿಕ್ಕಿ: ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು

ಕಡಬ: ಬಸ್ಸು ಬಂತೆಂದು ಅವಸರದಲ್ಲಿ ಓಡುವ ವೇಳೆ ವಿದ್ಯಾರ್ಥಿನಿಗೆ ಕಾರು ಡಿಕ್ಕಿ: ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು

Kadaba Times News
0
ಕಡಬ :ಬಸ್ಸು ಬಂತೆಂದು ಅವಸರದಲ್ಲಿ  ರಸ್ತೆ ದಾಟುವ ವೇಳೆ  ಕಾರು ಡಿಕ್ಕಿ ಹೊಡೆದು  ಕಾಲೇಜು ವಿದ್ಯಾರ್ಥಿನಿಯೋರ್ವಳು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾದ ಘಟನೆ ನ.22 ಮುಂಜಾನೆ ಹೊಸಮಠ ಬಳಿ ನಡೆದಿದೆ.


ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ವಿದ್ಯಾರ್ಥಿನಿ ದೇರಾಜೆಯ ದೀಕ್ಷಾ  ಎಂದು ಗುರುತಿಸಲಾಗಿದೆ.

ಉಪ್ಪಿನಂಗಡಿ- ಸುಬ್ರಹ್ಮಣ್ಯ ಹೆದ್ದಾರಿಯ ಹೊಸಮಠ ದೇರಾಜೆಯಲ್ಲಿ ಕಡಬದಿಂದ ಹೊರಟ ಬಸ್ ದೇರಾಜೆ ಬಸ್ ನಿಲ್ದಾಣದ ಬಳಿ ನಿಂತಿತ್ತು.ಈ ಸಂದರ್ಭದಲ್ಲಿ ಲಿಂಕ್ ರಸ್ತೆಯಿಂದ  ದ್ವಿಚಕ್ರ ವಾಹನದಿಂದ ಇಳಿದು ರಸ್ತೆಯ ಇನ್ನೊಂದು ಬದಿಗೆ ಅವಸರದಿಂದ ಓಡುವ ವೇಳೆ ಉಪ್ಪಿನಂಗಡಿ ಕಡೆಯಿಂದ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.ಈ ರಸ್ತೆ ಅಪಘಾತದ  ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸದ್ಯ ಗಾಯಾಳು ವಿದ್ಯಾರ್ಥಿನಿಯನ್ನು  ಪುತ್ತೂರಿಗೆ ಕೊಂಡೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ ಎಂಬ ಮಾಹಿತಿ ಲಭಿಸಿದೆ. . ಘಟನಾ ಸ್ಥಳಕ್ಕೆ ಕಡಬ  ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top