ಅಧಿಕಾರಿಗಳು ಕೇಂದ್ರಸ್ಥಾನ‌ ಬಿಟ್ಟು ಹೊರಗೆ ಹೋಗುವಂತಿಲ್ಲ,ಫೋನ್ ಕರೆ ಬಂದರೆ ಸ್ವೀಕರಿಸಿ ಸ್ಪಂದಿಸಿ

ಅಧಿಕಾರಿಗಳು ಕೇಂದ್ರಸ್ಥಾನ‌ ಬಿಟ್ಟು ಹೊರಗೆ ಹೋಗುವಂತಿಲ್ಲ,ಫೋನ್ ಕರೆ ಬಂದರೆ ಸ್ವೀಕರಿಸಿ ಸ್ಪಂದಿಸಿ

Kadaba Times News
0

ಜನರು ಸಮಸ್ಯೆ ಹೇಳಿಕೊಂಡು ಅಧಿಕಾರಿಗಳಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ ಎಂಬ ದೂರುಗಳು‌ ಬರಬಾರದು. ಜನರು ಕಷ್ಟಗಳನ್ನು ಹೇಳಲು ನಮಗೆ ಕರೆ ಮಾಡುತ್ತಾರೆ. ಆಗ ನಾವು ಕರೆ ಸ್ವೀಕರಿಸಿ ಸ್ಪಂದನೆ ಮಾಡಬೇಕು.‌ಮತ್ತು ತಕ್ಷಣ ಸ್ಥಳ ಪರಿಶೀಲನೆ ‌ಮಾಡಬೇಕು. 


ಕಡಬ  ಟೈಮ್ಸ್ ,ಸುಳ್ಯ:  ಮಳೆಗಾಲದ ಈ ಸಂದರ್ಭದಲ್ಲಿ ಅಲ್ಲಲ್ಲಿ ಪ್ರಾಕೃತಿಕ ವಿಕೋಪ ನಡೆಯುತ್ತಿದೆ. ಅಧಿಕಾರಿಗಳು ಈ ಸಂದರ್ಭ ಕೇಂದ್ರ ಸ್ಥಾನದಲ್ಲೇ ಇದ್ದು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಶಾಸಕಿ‌ ಭಾಗೀರಥಿ ಮುರುಳ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.



ಮೇ.26ರಂದು ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಪ್ರಾಕೃತಿಕ ವಿಕೋಪ‌ ಜಾಗೃತಿ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು ಮಳೆಗಾಲದ ಸಂದರ್ಭ ಗ್ರಾಮ ವ್ಯಾಪ್ತಿಯಲ್ಲಿ ಮರ ಬೀಳುವುದು, ಗುಡ್ಡ ಜರಿತ, ನದಿ ತಿಂಬಿ ಹರಿಯುವುದು ಇತ್ಯಾದಿ ವಿಕೋಪಗಳು‌ ನಡೆಯುತ್ತಿರುತ್ತದೆ.


ಜನರು ಸಮಸ್ಯೆ ಹೇಳಿಕೊಂಡು ಅಧಿಕಾರಿಗಳಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ ಎಂಬ ದೂರುಗಳು‌ ಬರಬಾರದು. ಜನರು ಕಷ್ಟಗಳನ್ನು ಹೇಳಲು ನಮಗೆ ಕರೆ ಮಾಡುತ್ತಾರೆ. ಆಗ ನಾವು ಕರೆ ಸ್ವೀಕರಿಸಿ ಸ್ಪಂದನೆ ಮಾಡಬೇಕು.‌ಮತ್ತು ತಕ್ಷಣ ಸ್ಥಳ ಪರಿಶೀಲನೆ ‌ಮಾಡಬೇಕು. ಒಂದು ವೇಳೆ ಘಟನೆ ನಡೆದ ದಿನ ಹೋಗಲು ಸಾಧ್ಯವಾಗದಿದ್ದರೂ ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿ. ಮರುದಿನ ನೀವು ಹೋಗಬೇಕು ಎಂದು ಶಾಸಕರು ಸೂಚನೆ ನೀಡಿದರು.


ಇ.ಒ.‌ ರಾಜಣ್ಣ, ತಹಶೀಲ್ದಾರ್ ಮಂಜುನಾಥ್, ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಹಾಗೂ ಅಧಿಕಾರಿಗಳು ಇದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top