ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ದಲಿತ ಸಮುದಾಯದ ಯುವತಿಗೆ ಹಲ್ಲೆ ಪ್ರಕರಣ: ಆರೋಪಿ ಮಹಿಳೆಯ ಬಂಧನ-ಎಸ್‌ಪಿ ಹರಿರಾಮ್‌ ಶಂಕರ್‌

ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ದಲಿತ ಸಮುದಾಯದ ಯುವತಿಗೆ ಹಲ್ಲೆ ಪ್ರಕರಣ: ಆರೋಪಿ ಮಹಿಳೆಯ ಬಂಧನ-ಎಸ್‌ಪಿ ಹರಿರಾಮ್‌ ಶಂಕರ್‌

Kadaba Times News
0

 ಕಡಬ ಟೈಮ್ಸ್  (KADABA TIMES): ಕುಂದಾಪುರ ತಾಲೂಕು  ಗುಲ್ವಾಡಿ ಗ್ರಾಮದ ಮಾವಿನಕಟ್ಟೆಯ ಔಷಧ ಅಂಗಡಿಯಲ್ಲಿ ಚಿಲ್ಲರೆ ಕೊಡದಿರುವ ವಿಚಾರಕ್ಕೆ ಸಂಬಂಧಿಸಿ ದಲಿತ  ಯುವತಿಯ ಮೇಲೆ ಹಲ್ಲೆಗೈದ ಮಹಿಳೆಯನ್ನು ಮಂಗಳವಾರ ಬಂಧಿಸಲಾಗಿದೆ.



 ಹಲ್ಲೆಗೊಳಗಾದ ಯುವತಿ ಆಸ್ಪತ್ರೆಗೆ ದಾಖಲಾಗಿದ್ದರು .   ಔಷಧ ಖರೀದಿಸಿದ ಮಹಿಳೆಯು  500 ರೂ. ಕೊಟ್ಟಿದ್ದಳು. ಚಿಲ್ಲರೆ ಕೊಡುವಂತೆ ಲಕ್ಷ್ಮೀ ಹೇಳಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಅದರ ಸಿಸಿಟಿವಿ ಫೂಟೇಜ್‌ನ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.


ಯುವತಿಯ ಮೇಲೆ ಮಹಿಳೆ  ಹಲ್ಲೆ ನಡೆಸಿ, ಅವಾಚ್ಯವಾಗಿ ಜಾತಿ ನಿಂದನೆ ನಡೆಸಿರುವುದಾಗಿ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಸ್‌ಪಿ ಹರಿರಾಮ್‌ ಶಂಕರ್‌ ತಿಳಿಸಿದ್ದಾರೆ. ಅವರು ಹಲ್ಲೆಗೊಳಗಾದ ಯುವತಿ ದಾಖಲಾದ ಆಸ್ಪತ್ರೆಗೆ ಸೋಮವಾರ ರಾತ್ರಿ ಭೇಟಿ ನೀಡಿದ್ದರು.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top