ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯಾತ್ರಾರ್ಥಿಗೆ ಖಾಸಗಿ ವಸತಿ ಗೃಹ ಏಜೆಂಟ್ ಗಳಿಂದ ಹಲ್ಲೆ ಘಟನೆ: ಹರೀಶ್ ಇಂಜಾಡಿ ಪ್ರತಿಕ್ರಿಯೆ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯಾತ್ರಾರ್ಥಿಗೆ ಖಾಸಗಿ ವಸತಿ ಗೃಹ ಏಜೆಂಟ್ ಗಳಿಂದ ಹಲ್ಲೆ ಘಟನೆ: ಹರೀಶ್ ಇಂಜಾಡಿ ಪ್ರತಿಕ್ರಿಯೆ

Kadaba Times News
0

ಕಡಬ ಟೈಮ್ಸ್  (KADABA TIMES): ಸುಬ್ರಹ್ಮಣ್ಯ: ಕುಕ್ಕೆ  ಸುಬ್ರಹ್ಮಣ್ಯದಲ್ಲಿ ಯಾತ್ರಾರ್ಥಿ ಎನ್ನಲಾದ ವ್ಯಕ್ತಿಗೆ  ಖಾಸಗಿ ವಸತಿ  ಗೃಹದ ಏಜೆಂಟ್ ಗಳು ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಕುಕ್ಕೆ ದೇಗುಲದ ವ್ಯವಸ್ಥಾಪನಾ ಸಮಿತಿ  ಅಧ್ಯಕ್ಷ  ಹರೀಶ್ ಇಂಜಾಡಿ ಪ್ರತಿಕ್ರಿಯೆ ನೀಡಿದ್ದಾರೆ.

ಹರೀಶ್ ಇಂಜಾಡಿ (KADABA TIMES)


ಖಾಸಗಿ ವಸತಿ ಗೃಹಗಳ ಏಜೆಂಟ್ ಗಳು  ತಮ್ಮ ವ್ಯಾಪಾರದ  ನಿಮಿತ್ತ  ಯಾತ್ರಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ಇದಾಗಿದೆ. ಪೊಲೀಸರ ಗಮನಕ್ಕೂ ಈ ವಿಚಾರವನ್ನು ತರಲಾಗಿದೆ. ಸುಬ್ರಹ್ಮಣ್ಯ ಪೊಲೀಸರು ಈಗಾಗಲೇ ಘಟನೆಗೆ ಸಂಬಂಧಿಸಿ ಕೆಲವರನ್ನು ವಿಚಾರಣೆಗೆ ಒಳಪಡಿಸಿರುವುದು ತಿಳಿದು ಬಂದಿದೆ.


ಕುಕ್ಕೆ  ಕ್ಷೇತ್ರಕೆ ಬರುವ ಭಕ್ತಾದಿಗಳು  ಯಾರು ಕೂಡ  ಭಯಭೀತರಾಗಬೇಕಾಗಿಲ್ಲ, ಸೂಕ್ತ  ಭದ್ರತೆ  ಒದಗಿಸುವುದು  ನಮ್ಮ ಮೊದಲ ಆದ್ಯತೆಯಾಗಿದೆ.  ದೇವಸ್ಥಾನದ ವತಿಯಿಂದ ವಸತಿ ಗೃಹಗಳ ಹಾಗೂ  ಕೊಟ್ಟಡಿಗಳ ಸಂಖ್ಯೆ ಕಡಿಮೆ ಇದ್ದು ಮುಂದಿನ ದಿನಗಳಲ್ಲಿ ಒಂದು ಸಾವಿರ ಕ್ಕೂ ಹೆಚ್ಚು ಕೊಠಡಿಗಳನ್ನು  ಹೊಂದಿರುವ ವಸತಿಗೃಹಗಳನ್ನು ನಿರ್ಮಾಣ ಮಾಡಲಿದ್ದೇವೆ ಭಕ್ತರಿಗೆ ಇನ್ನಷ್ಟು ಹೆಚ್ಚಿನ ಅನುಕೂಲತೆಗಳನ್ನು ಮಾಡುತ್ತೇವೆ.


ಕೆಲವು ವಸತಿಗೃಹಗಳಲ್ಲಿ ನಡೆಯುವ  ಕಾನೂನು ಬಾಹಿರ ಚಟುವಟಿಕೆಗಳಿಗೆ     ಸ್ಥಳೀಯಾಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕಿದೆ. ದೇವಸ್ಥಾನದ ಹೆಸರಿಗೆ ಮಸಿ ಬಳಿಯುವಂತಹ ಯಾವುದೇ ಘಟನೆಗಳನ್ನು ಸಹಿಸುವುದಿಲ್ಲ ಎಂದಿದ್ದಾರೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top